Home Kannada ಭಾರತ್ ಬ್ಯಾಂಕ್ ಮಿರಾರೋಡ್ ಶಾಖೆಯ ರಜತ ಮಹೋತ್ಸವ. ಸ್ವಾವಲಂಬಿ ಬದುಕಿಗೆ ಬ್ಯಾಂಕ್ ಕಾಯಕಲ್ಪ ನೀಡಿದೆ-ಜನಾರ್ಧನ ಎಂ.ಪೂಜಾರಿ.

ಭಾರತ್ ಬ್ಯಾಂಕ್ ಮಿರಾರೋಡ್ ಶಾಖೆಯ ರಜತ ಮಹೋತ್ಸವ. ಸ್ವಾವಲಂಬಿ ಬದುಕಿಗೆ ಬ್ಯಾಂಕ್ ಕಾಯಕಲ್ಪ ನೀಡಿದೆ-ಜನಾರ್ಧನ ಎಂ.ಪೂಜಾರಿ.

by akash

ಮಾನವ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಜನ ಸಾಮಾನ್ಯರಿಗೆ ಉದ್ಯೋಗ ಜಗತ್ತನ್ನು ಪರಿಚಯಿಸಿದ ಭಾರತ್ ಬ್ಯಾಂಕ್ ಯಶಸ್ವಿನ ಮುನ್ನಡೆ ಸಾಧಿಸಿದೆ. ಕನಿಷ್ಠ ಸಾಲವನ್ನು ಲಕ್ಷಾಂತರ ಮಂದಿಗೆ ನೀಡಿ ಸ್ವಾವಲಂಬಿ ಬದುಕಿಗೆ ಹೊಸತನ ಕಲ್ಪಿಸಿದೆ.ಪ್ರಸ್ತುತ ಕಾಲ ಘಟ್ಟದಲ್ಲಿ ಬ್ಯಾಂಕುಗಳು ಜನ ಸಾಮಾನ್ಯರ ಅವಿಭಾಜ್ಯ ಅಂಗವಾಗಿದೆ. ಕಾನೂನು ನಿಯಮಗಳನ್ನು ನಮ್ಮಲ್ಲಿರುವ ವಿನೂತನ ಸವಲತ್ತುಗಳನ್ನು ಖಾತೆದಾರರಿಗೆ ವಿವರಿಸಿದಾಗ ನಮ್ಮ ಯೋಜನೆ ಗುರಿ ತಲಪುಲು ಸಾಧ್ಯವಾಗಲಿದೆ.ಕರ್ತವ್ಯದಲ್ಲಿ ಪ್ರಾಮಾಣಿಕತೆ,ಸತ್ಯ ಸಂಧತೆ, ಸನ್ನಡತೆ, ಪಾರದರ್ಶಕತೆಗಳನ್ನು ತೋರಿದ್ದರಿಂದ ಹಲವಾರು ಪ್ರಶಸ್ತಿಗಳನ್ನು ಭಾರತ್ ಬ್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದು ಭಾರತ್ ಬ್ಯಾಂಕಿನ ಉಪ ಮಹಾ ಪ್ರಂಬಂಧಕ ಜನಾರ್ಧನ ಎಂ. ಪೂಜಾರಿ ತಿಳಿಸಿದರು. ಜ. 3 ರಂದು ಬೆಳಿಗ್ಗೆ ಮೀರಾರೋಡು ಪೂರ್ವದ ಭಾರತ್ ಬ್ಯಾಂಕ್ ಮೀರಾರೋಡು ಶಾಖೆಯ ರಜತ ಮಹೋತ್ಸವದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು ಬಿಲ್ಲವರ ಎಸೋಸಿಯೇಶನ್ ಪ್ರಾಯೋಜಿತ ಭಾರತ್ ಬ್ಯಾಂಕ್ ನಮ್ಮೆಲ್ಲರ ಮಾತೃ ಸಂಸ್ಥೆಯಾಗಿದೆ. ಅದರ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಾಯಿಯ ಋಣ ಸಂದಾಯಕ್ಕಾಗಿ ಮುಂದಾಗುವ ಎಂದು ಹೇಳಿದ ಅವರು ನೂತನ ವರ್ಷದ ಶುಭಾಶಯ ಹಾರೈಸಿದರು. ಕೇಂದ್ರ ಕಚೇರಿಯ ಮುಖ್ಯ ಪ್ರಬಂಧಕ ದಯಾನಂದ ಆರ್ ಅಮೀನ್ ಶುಭಹಾರೈಸಿ ಮಾತನಾಡಿ ಜಾಗತಿಕ ಉತ್ಪಾದನೆ ಮತ್ತು ವ್ಯಾಪಾರದ ಕುಸಿತದಿಂದ ಹಣಕಾಸು ಸಂಸ್ಥೆಗಳು ಹಲವಾರು ಏರಿಳಿತಗಳನ್ನು ಕಂಡವು. ಇಂತಹ ಸಂಧಿಗ್ದ ಸಮಯದಲ್ಲಿ ಭಾರತ್ ಬ್ಯಾಂಕ್ ಆನೇಕ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದೆ. ಆಧುನಿಕ ಸೇವೆಯಲ್ಲಿ ಜನ ಮನ್ನಣೆ ಗಳಿಸಿ ದೇಶದ ಆತ್ಯುತ್ತಮ ಗ್ರಾಹಕ ಸ್ನೇಹಿ ಬ್ಯಾಂಕ್ ಎಂದು ಪ್ರಸಿದ್ದಿ ಪಡೆದಿದೆ ಎಂದರು. ಭಾರತ್ ಬ್ಯಾಂಕ್ ಮೀರಾರೋಡು ಶಾಖೆಯ ಮುಖ್ಯಸ್ಥ ಪ್ರೇಮಾನಂದ ವಿ. ಪೂಜಾರಿ ಅವರು ಪ್ರಸ್ತಾವಿಕವಾಗಿ ಮಾತನಾಡಿ 25 ವರ್ಷಗಳ ಸುದೀಘ ಬೆಳವಣಿಗೆಗೆ ಸಹಕರಿಸಿದ ಖಾತೆದಾರನ್ನು, ಶೇರುದಾರನ್ನು, ನಿವೃತ್ತಿ ಸಿಬಂದಿಗಳನ್ನು ಅಭಿನಂದಿಸಿ ಗೌರವಿಸಿದರು. ಸಹಾಯಕ ಮುಖ್ಯಸ್ಥೆ ಉಮಾ ಕೆ.ಬಂಗೇರ ಸ್ವಾಗತಿಸಿದರು. ಮುಖ್ಯ ಅಧಿಕಾರಿ ವೀಣಾ ಆರ್. ಪೂಜಾರಿ ಧನ್ಯವಾದ ಗೈದರು. ಬಿಲ್ಲವರ ಎಸೋಸಿಯೋಶನ್ ಮೀರಾರೋಡು ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಸುಭಾಶ್ಚಂದ್ರ ಕರ್ಕೇರ, ಗೌರವ ಕಾರ್ಯಧ್ಯಕ್ಷ ಎಚ್.ಎಂ. ಪೂಜಾರಿ, ಗೌ.ಕಾರ್ಯದರ್ಶಿ ಜಿ.ಕೆ.ಕೆಂಚನಕೆರೆ, ಉಪಕಾರ್ಯಧ್ಯಕ್ಷ ಎನ್.ಪಿ.ಕೋಟ್ಯಾನ್, ದಿನೇಶ್ ಸುವರ್ಣ ವಿಜಯ ಅಮೀನ್, ಬಿಲ್ಲವರ ಎಸೋಸಿಯೇಶ್ ಸ್ಥಳೀಯ ಸಮಿತಿಯ ಕೋಶಾಧಿಕಾರಿ ಕೆ.ಎಸ್. ಬಂಗೇರ ಸಮಾಜ ಸೇವಕ ಗೋಪಾಲ ಕೃಷ್ಣಗಾಣಿಗ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಶಿವಾನಂದ ಭಟ್ ಅವರ ಪೌರೋತ್ಯದಲ್ಲಿ ಗಣ ಹೋಮ ಮತ್ತು ಬ್ರಹ್ಮಶ್ರಿ ನಾರಾಯಣಗಳ ಪೂಜೆ ನೆರವೇರಿತು. ಜಯಾಲಕ್ಷ್ಮೀ ಹೊಸ ಬೆಟ್ಟು, ಪ್ರಜ್ಞಾ ಅಗರ್ವಾಲ್, ಸೀಮಾ ಅಂಚನ್, ರೂಪಾ ಎಸ್. ಅಂಚನ್, ಮಹೇಶ್ ಕರ್ಕೇರ, ಸುಜತಾ ಎಲ್. ಕೋಟ್ಯಾನ್, ರಾಜೇಶ್ ಶಿಂದೆ, ತೆಜಸ್ವಿನಿ ಎಸ್. ಪೂಜಾರಿ, ದೀಪಾಳಿ ಏ. ಪೂಜಾರಿ, ದೀಪಾಕ್ ಎಸ್. ಸಾಠೆ, ಪವಿತ್ರಾ ಕೆ. ಪೂಜಾರಿ, ಅನಿಶಾ ಡಿ. ಕೋಟ್ಯಾನ್, ರಾಕೇಶ್ ಕೆ. ಪೂಜಾರಿ, ಮುಂತಾದವರು ಸಹಕರಿಸಿದರು. ಚಿತ್ರ ವರದಿ ರಮೇಶ ಅಮೀನ್.

Related Posts

Leave a Comment

Translate »