Home Kannada ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ ಕುದ್ರೋಳಿ ಗಣೇಶ್ ವರಿಂದ ವಿಶೇಷ ಜಾದೂ ಪ್ರದರ್ಶನ

ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ ಕುದ್ರೋಳಿ ಗಣೇಶ್ ವರಿಂದ ವಿಶೇಷ ಜಾದೂ ಪ್ರದರ್ಶನ

by Eha

ಮಂಗಳೂರು – ಮಂಗಳೂರು ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಮಾರ್ಚ 21 ರಂದು ನಡೆದ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರಸಿದ್ದ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ವಿಶೇಷ ಜಾದೂ ಪ್ರದರ್ಶನ ನಡೆಯಿತು.ಕಾರ್ಯಕ್ರಮಕ್ಕೆ ಆಗಮಿಸಿದ ಪ್ರವಾಸೋದ್ಯಮ ಸಚಿವರಾದ ಶ್ರೀ ಸಿ ಪಿ ಯೋಗೇಶ್ವರ್ ಇವರಿಗೆ ಮ್ಯಾಜಿಕ್ ಮಾಡಿದ ಕುದ್ರೋಳಿ ಗಣೇಶ್ ಸಚಿವರು ಇಸ್ಪೀಟ್ ಪ್ಯಾಕ್ ನಿಂದ ಆರಿಸಿದ ಎಲೆಯನ್ನು ಅವರ ಕೈಯಲ್ಲೇ ಪ್ರತ್ಯಕ್ಷ ಮಾಡಿಸಿ ಅಚ್ಚರಿಗೊಳಿಸಿದರು. ಜೊತೆಗೆ ಸುಪ್ತ ಮನಸ್ಸಿನ ಆಲೋಚನೆಗಳನ್ನು ಜಾದೂವಿನಿಂದ ಓದುವ ವಿವಿಧ ತಂತ್ರಗಳಿಂದ ನೆರೆದಿದ್ದ ಪತ್ರಕರ್ತರು ಹಾಗೂ ಅವರ ಕುಟುಂಬದವರನ್ನು ಕುದ್ರೋಳಿ ಗಣೇಶ್ ಬೆರಗುಗೊಳಿಸಿದರು. ಜಾದೂವಿನ ತಂತ್ರಗಾರಿಕೆಯ ಜೊತೆ ಕೊಳಲಿನ ನಾದವನ್ನು ಬೆಸೆದು ನೆರೆದಿದ್ದವರಿಗೆ ರಂಜನೆ ನೀಡಿದರು.ಇದೇ ಸಂದರ್ಭದಲ್ಲಿ ಈ ಬಾರಿಯ ಪ್ರೆಸ್ ಕ್ಲಬ್ ಪ್ರಶಸ್ತಿಯ ಆಯ್ಕೆ ಸಮಿತಿಯ ತೀರ್ಪುಗಾರರಾಗಿಯೂ ಕೊಡುಗೆ ನೀಡಿದ ಕುದ್ರೋಳಿ ಗಣೇಶ್  ಇವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ರವರು ಸನ್ಮಾನನಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು, ಮಂಗಳೂರು ಪ್ರೆಸ್ ಕ್ಲಬ್ಅಧ್ಯಕ್ಷರಾದ  ಅನ್ನು ಮಂಗಳೂರು , ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ  , ಪತ್ರಿಕಾ ಭವನ ಟ್ರಸ್ಟ ಇದರ ಅಧ್ಯಕ್ಷರಾದ   ಕೆ ಆನಂದ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Comment