Home Kannada ಮಡಿಕೇರಿ, ಮಂಗಳೂರು ರಸ್ತೆ ದುರಸ್ತಿ – ಲಾರಿ ಚಾಲಕರ ಪರದಾಟ

ಮಡಿಕೇರಿ, ಮಂಗಳೂರು ರಸ್ತೆ ದುರಸ್ತಿ – ಲಾರಿ ಚಾಲಕರ ಪರದಾಟ

by akash

ಮಡಿಕೇರಿ: ರಸ್ತೆ ಕುಸಿತವಾದ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿ 2 ನೇ ಮೊಣ್ಣಗೇರಿ ಬಳಿ ಭಾರೀ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಪಾಜೆ ಬಳಿ ರಸ್ತೆ ಕುಸಿದು ಪರಿಣಾಮದಿಂದ ಮೈಸೂರಿನಿಂದ ಮಂಗಳೂರಿಗೆ ತೆರಳುವ ಲಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವಾರಾಂತ್ಯದ  ಕರ್ಫ್ಯೂ ನಿಂದ ಹೊಟೇಲ್‍ಗಳು ಬಂದ್ ಅಗಿರುವುದರಿಂದ ಊಟ ತಿಂಡಿ ಇಲ್ಲದೆ ಲಾರಿ ಚಾಲಕರ ಪರದಾಟ ಮಾಡುವಂತಾಗಿದೆ. ರಸ್ತೆ ಕುಸಿದು ಲಾಕ್ ಆಗಿದ್ದ ಲಾರಿಗಳಿಗೆ ಕೆಲವು ಸಮಯದ ನಂತರ ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್ ಲಾರಿಗಳ ಸಂಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. ಜೋಡುಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೂರದ ಊರಿಗಳಿಂದ ಬರುವ ಸರಕು ಸಾಗಣೆ ಮಾಡುವ ವಾಹನಗಳಿಗೆ ಇದೀಗ ಜಿಲ್ಲಾಡಳಿತ ನಿರ್ಬಂಧ ಹೇರಲಾಗಿದೆ.

Related Posts

Leave a Comment