Home Kannada ಮದುವೆಯಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಅರೆಸ್ಟ್

ಮದುವೆಯಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಅರೆಸ್ಟ್

by Eha

ದೆಹಲಿ: ಮದುವೆ ಸಮಾರಂಭವೊಂದರಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಗುರುವಾರ ದೆಹಲಿಯಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವೀಡಿಯೋದಲ್ಲಿ ಆರೋಪಿ ಪಾರ್ಟಿ ಡ್ರೆಸ್ ಧರಿಸಿದ್ದು, ಕೈಯಲ್ಲಿ ಕಪ್ಪು ಬಣ್ಣದ ಬಂದೂಕು ಹಿಡಿದು, ವೀಡಿಯೋ ಮಾಡಿ(ವೀಡಿಯೋ ಬನಾವೋ) ಎಂದು ಹೇಳುವ ಮೂಲಕ ಗಾಳಿಯಲ್ಲಿ ಗುಂಡು ಹಾರಿಸುತ್ತಾನೆ. ವೀಡಿಯೋದಲ್ಲಿ ಈತ ಗುಂಡು ಹಾರಿಸಲು ಮುಂದಾದಾಗ ಅಲ್ಲಿದ್ದವರು ನೀನು ಇದನ್ನು ಮತ್ತೆ ಶುರು ಮಾಡಿದೆಯಾ ಎಂದು ಆತನನ್ನು ಗದರಿಸುತ್ತಿರುವುದು ಕಾಣಿಸುತ್ತದೆ.

ಘಟನೆ ಕುರಿತಂತೆ ಪೊಲೀಸರು ಆರೋಪಿಯನ್ನು ಲೋಕಲ್ ರೌಡಿ ಆಶಿಶ್ ಅಲಿಯಾಸ್ ಮನೀಶ್(32) ಎಂದು ಗುರುತಿಸಿದ್ದು, ಮದುವೆ ಸಮಾರಂಭದಲ್ಲಿ ಅಕ್ರಮ ಬಂದೂಕನ್ನು ಬಳಸಿ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ. ಆರೋಪಿ ತನ್ನ ಸೋದರ ಸಂಬಂಧಿ ಮದುವೆ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ್ದು, ಪೊಲೀಸರು ನಿನ್ನೆ ಆಶಿಶ್‍ನನ್ನು ಬಂಧಿಸಿದ್ದಾರೆ ಹಾಗೂ ಆತನ ಬಳಿ ಇದ್ದ ಸೆಮಿ-ಆಟೋಮಿಟಿಕ್ ಗನ್ ಮತ್ತು ಲೈವ್ ಕಾಟ್ರ್ರಿಜ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

Related Posts

Leave a Comment