Home Kannada ಮದ್ಯ ಸೇವಿಸಿ ಕಾರು ಚಲಾಯಿಸಿ ರಿಕ್ಷಾ ಚಾಲಕನ ಸಾವು ಪ್ರಕರಣ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ಮದ್ಯ ಸೇವಿಸಿ ಕಾರು ಚಲಾಯಿಸಿ ರಿಕ್ಷಾ ಚಾಲಕನ ಸಾವು ಪ್ರಕರಣ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ

by Eha

ಮಂಗಳೂರು: ಕಂಠಪೂರ್ತಿ ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿ, ರಿಕ್ಷಾ ಚಾಲಕನೋರ್ವನ ಸಾವಿಗೆ ಕಾರಣನಾಗಿದ್ದ ಕಾರು ಚಾಲಕನಿಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಕಾರು ಚಾಲಕ ಮಂಗಳೂರಿನ ಬಿಕರ್ನಕಟ್ಟೆಯ ಅನೀಶ್ ಜಾನ್ ಶಿಕ್ಷೆಗೊಳಗಾದ ಆರೋಪಿ. 2017ರ ಆಗಸ್ಟ್ 6ರಂದು ರಾತ್ರಿ ನಗರದ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಅನೀಶ್ ಜಾನ್, ಜ್ಯೋತಿ ಸರ್ಕಲ್ ಸಮೀಪ ಆಟೋರಿಕ್ಷಾ ನಿಲ್ದಾಣದಲ್ಲಿ ನಿಂತಿದ್ದ ರಿಕ್ಷಾ ಚಾಲಕ ಪ್ರವೀಣ್ ಎಂ.ಎ. ಅಶೋಕ್ ಪಾಸ್ಕಲ್ ಡಿಸೋಜ ಮತ್ತು ಜಗದೀಶ್ ಎಂಬವರಿಗೆ ಡಿಕ್ಕಿ ಹೊಡೆದಿದ್ದನು. ಪರಿಣಾಮ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಘಟನೆಯಲ್ಲಿ ಉಳಿದ ಇಬ್ಬರು ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸರು ಬಂದರ್ ಪೊಲೀಸ್ ಠಾಣೆಯಲ್ಲಿ ‘ಕೊಲೆಯಲ್ಲದ ಮಾನವ ಹತ್ಯೆ’ ಪ್ರಕರಣ ದಾಖಲಿಸಿದ್ದರು.

Related Posts

Leave a Comment