Home Kannada ಮದ್ವೆಯಾಗಿ 8 ತಿಂಗಳಿಗೇ ಗೃಹಿಣಿ ನೇಣಿಗೆ ಶರಣು

ಮದ್ವೆಯಾಗಿ 8 ತಿಂಗಳಿಗೇ ಗೃಹಿಣಿ ನೇಣಿಗೆ ಶರಣು

by Eha

ದಾವಣಗೆರೆ: ಮದುವೆಯಾಗಿ 8 ತಿಂಗಳಿಗೇ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯ ಬಂಬೂಬಜಾರ್‍ನ ಮನೆಯೊಂದರಲ್ಲಿ ನಡೆದಿದೆ. ಬಿಬೀ ಅಜೀರಾ (19) ಆತ್ಮಹತ್ಯೆಗೀಡಾದ ಗೃಹಿಣಿ. ಈಕೆ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಬಿಬೀ ಅಜಿರಾ-ಇಮ್ರಾನ್ ಮದುವೆಯಾಗಿ 8 ತಿಂಗಳಷ್ಟೆ ಕಳೆದಿತ್ತು. ಅಜಿರಾ ಕುಟುಂಬಸ್ಥರು 1ಲಕ್ಷ ರೂ ನಗದು, 3 ತೊಲೆ ಚಿನ್ನಾಭರಣ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದರು. ಆದರೆ ಇತ್ತೀಚಿಗೆ ಪತಿ ಹಾಗೂ ಮನೆಯವರು ವ್ಯಾಪಾರ ಮಾಡಲು ತವರಿನಿಂದ ಹಣ ಹಾಗೂ ಬೈಕ್‍ಗೆ ಪೀಡಿಸುತ್ತಿದ್ದರು. ಇದರಿಂದ ಮನನೊಂದು ಅಜೀರಾ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಸದ್ಯ ಘಟನೆ ಸಂಬಂಧ ನ್ಯಾಯಕ್ಕಾಗಿ ಅಜೀರಾ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತಹಸೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment