Home Kannada ಮಧ್ಯರಾತ್ರಿ ಅಪ್ರಾಪ್ತೆಯನ್ನು ಅಪಹರಿಸಿ, ಕಾರಿನೊಳಗೆ ರೇಪ್ ಮಾಡಿದ..!

ಮಧ್ಯರಾತ್ರಿ ಅಪ್ರಾಪ್ತೆಯನ್ನು ಅಪಹರಿಸಿ, ಕಾರಿನೊಳಗೆ ರೇಪ್ ಮಾಡಿದ..!

by Eha

ಲಕ್ನೋ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ವ್ಯಕ್ತಿಯೊಬ್ಬ ಅಪ್ರಾಪ್ತೆಯನ್ನು ಅಪಹರಿಸಿ ಬಳಿಕ ಕಾರಿನೊಳಗೆ ರೇಪ್ ಮಾಡಿ ಬೆದರಿಕೆ ಹಾಕಿದ ಘಟನೆ ಉತ್ತರಪ್ರದೇಶದ ಆಲಿಘಡ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಶನಿವಾರ ಮಧ್ಯರಾತ್ರಿ ಆಲಿಘಡ್ ನಿಂದ 50 ಕಿ.ಮೀ ದೂರದಲ್ಲಿರುವ ಗ್ಯಾಂಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧ್ಯರಾತ್ರಿ ಆರೋಪಿ ಪುಷ್ಪೇಂದ್ರ ಆ ಪ್ರದೇಶದಲ್ಲಿ ಓಡಾಡುತ್ತಿದ್ದನು. ಇದೇ ವೇಳೆ 15 ವರ್ಷದ ಬಾಲಕಿ ಬಯಲು ಶೌಚ ಮಾಡಲೆಂದು ಮನೆಯಿಂದ ಹೊರಬಂದಿದ್ದಳು. ಇದೇ ಸಂದರ್ಭ ಉಪಯೋಗಿಸಿಕೊಂಡ ಆರೋಪಿ, ಆಕೆಯನ್ನು ಅಲ್ಲಿಂದಲೇ ಎಳೆದುಕೊಂಡು ಹೋಗಿದ್ದಾನೆ. ನಂತರ ಕಾರೊಳಗೆ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ.

ಅಲ್ಲದೆ ಕಿರುಚಾಡಬೇಡ ಎಂದು ಹೇಳಿ ಚಾಕು ತೋರಿಸಿ ಬೆದರಿಕೆ ಕೂಡ ಒಟ್ಟಿದ್ದಾನೆ. ಆದರೂ ಸಹಾಯ ಮಾಡುವಂತೆ ಬಾಲಕಿ ಕೂಗಿಕೊಂಡಿದ್ದಾಳೆ. ಇದೇ ವೇಳೆ ಆಕೆಯ ಅಂಕಲ್ ಕೂಡ ಸಹಾಯಕ್ಕೆ ಬಂದಿದ್ದಾರೆ. ಆದರೆ ಆರೋಪಿ ಬಾಲಕಿಯ ಅಂಕಲ್ ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯಿಂದ ಬಾಲಕಿಯ ಅಂಕಲ್ ಗೆ ಗಾಯಗಳಾಗಿವೆ. ಮಗಳ ಮೇಲೆ ನಡೆದ ಅತ್ಯಾಚಾರ ವಿರುದ್ಧ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂತೆಯೇ ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಲ್ ಆಫೀಸರ್ ಸುಮರ್ ಕನೊಜಿಯಾ ತಿಳಿಸಿದ್ದಾರೆ.

Related Posts

Leave a Comment