Home Kannada ಮರಿಯಮ್ಮದೇವಿ, ದುರ್ಗಾದೇವಿ ಮಾಂಗಲ್ಯಸರ ಕಳ್ಳತನ

ಮರಿಯಮ್ಮದೇವಿ, ದುರ್ಗಾದೇವಿ ಮಾಂಗಲ್ಯಸರ ಕಳ್ಳತನ

by Eha

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕು ಮೂಡೂರ ಗ್ರಾಮದಲ್ಲಿ ಎರಡು ದೇವಸ್ಥಾನಗಳಲ್ಲಿ ದೇವಿಯ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಗ್ರಾಮದ ಮರಿಯಮ್ಮದೇವಿ ದೇವಸ್ಥಾನ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿ ಆಭರಣ ಕಳ್ಳತನವಾಗಿದೆ. ಎರಡು ಸಣ್ಣತಾಳಿ ಹಾಗೂ ಮೂಗುತಿಯನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ದುರ್ಗಾದೇವಿ ದೇವಾಲಯದಲ್ಲಿ 2ಗ್ರಾಂ ಚಿನ್ನದ ಎರಡು ಸಣ್ಣತಾಳಿ ಹಾಗೂ 1 ಗ್ರಾಂ ಮೂಗುತಿ ಕಳ್ಳತನವಾಗಿದೆ. ಎರಡು ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಒಟ್ಟು 18,000 ರೂ.ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಗ್ರಾಮದ ಜನರ ಆತಂಕವನ್ನುಂಟು ಮಾಡಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Related Posts

Leave a Comment