Home Kannada ಮಲಾಡ್ ತಥಾಸ್ತು ಫೌಂಡೇಶನ್ ನಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಮಲಾಡ್ ತಥಾಸ್ತು ಫೌಂಡೇಶನ್ ನಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

by akash

ಸಾಮೂಹಿಕ ಪೂಜೆಯಿಂದ ಸಂಘಟನೆ ಬಲಿಷ್ಠ: ವೇದಮೂರ್ತಿ ಸತೀಶ್ ಭಟ್ಚಿತ್ರ ವರದಿ ದಿನೇಶ್ ಕುಲಾಲ್ಮುಂಬೈ: ಮಲಾಡ್ ಪೂರ್ವದ ಪ್ರಸಿದ್ಧ ಪುರೋಹಿತರಾಗಿ ರುವ ವೇದಮೂರ್ತಿ ಸತೀಶ್ ಭಟ್ ಅವರ ನೇತೃತ್ವದಲ್ಲಿ ಸ್ಥಾಪಿತಗೊಂಡ ತಥಾಸ್ತು ಫೌಂಡೇಶನ್ ಪ್ರತಿ ತಿಂಗಳು ಹುಣ್ಣಿಮೆಯಂದು ಮಲಾಡ್ ಪರಿಸರದ  ವಿವಿಧ ಕ್ಷೇತ್ರಗಳಲ್ಲಿ ಸತ್ಯನಾರಾಯಣ ಪೂಜೆಯನ್ನು ಅನ್ನದಾನವನ್ನು ನಡೆಸುತ್ತಾ ಬರುತ್ತಿದ್ದಾರೆಆಗಸ್ಟ್ 22ರ ಹುಣ್ಣಿಮೆಯ ಹುಣ್ಣಿಮೆಯಂದು ಮಲಾಡ್ ಪೂರ್ವದ ದತ್ತ ಮಂದಿರ ರೋಡಿನ ಲಿರುವ ದತ್ತ ಮಂದಿರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಮಹಾಪೂಜೆ ಸತೀಶ್ ಭಟ್ ರವರ ಪೌರತ್ವ ದಲ್ಲಿ ನಡೆಯಿತುಪೂಜೆಯಲ್ಲಿ ಸ್ಥಳೀಯ  ಭಜನಾ ಮಂಡಳಿ ಮತ್ತು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಭಜನಾ ಮಂಡಳಿ ಪಾಲ್ಗೊಂಡಿದ್ದವು. ಪಾಲ್ಗೊಂಡ ಎಲ್ಲಾ ಭಜನಾ ಮಂಡಲಿಯನ್ನು. ಹಾಗೂ ಪೂಜೆಗೆ ಸಹಕಾರ ನೀಡಿದ ದಾನಿಗಳನ್ನು ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ವೇದಮೂರ್ತಿ ಸತೀಶ್ ಭಟ್ ಗೌರವಿಸಿ ಬಳಿಕ ಮಾತನಾಡುತ್ತಾ ತಥಾಸ್ತು ಫೌಂಡೇಶನ್ ನ ಮೂಲಕ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಒಂದಾಗಿದೆ ಜನರಲ್ಲಿ ಧಾರ್ಮಿಕತೆ ಮತ್ತು ಕೊರೋನಾ ರೋಗದ ಬಗ್ಗೆ ಭಯ  ದೂರಗೊಳಿಸಿ ಧೈರ್ಯ ತುಂಬುವ ಸೇವಾಕಾರ್ಯಗಳನ್ನು ನಡೆಸುತ್ತಿದ್ದೇವೆ. ಸಾಮೂಹಿಕ ಪೂಜೆಗಳಲ್ಲಿ ಪ್ರಾರ್ಥನೆಗಳಲ್ಲಿ ವಿಶಿಷ್ಟವಾದ ಶಕ್ತಿಯಿದೆ ಎಂದು ನುಡಿದರುಈ ಸಂದರ್ಭದಲ್ಲಿ ತಥಾಸ್ತು ಫೌಂಡೇಶನ್ ಉಪಾಧ್ಯಕ್ಷ ಶ್ರೀಧರ್ ಪೂಜಾರಿ . ಕಾರ್ಯದರ್ಶಿ ಉದಯ ಶೆಟ್ಟಿ. ಕೋಶಧಿಕಾರಿ ದಿನೇಶ್ ಅಮೀನ್. ಹಾಗೂ ಪದಾಧಿಕಾರಿಗಳು ಮತ್ತು ಭರತ್. ಲಕ್ಷ್ಮಣ್ ರಾವ್. ದಿನೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು

Related Posts

Leave a Comment