ಮುಂಬಯಿ : ಮಲಾಡ್ ಪೂರ್ವ ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಂದಿರದ ಮಾಜಿ ಅಧ್ಯಕ್ಷ ಅಂದೇರಿ ಪೂರ್ವದ ಮರೂಲ್.ನ್ ಭವಾನಿ ನಗರದ ನಿವಾಸಿ ಶ್ರೀಧರ್ ಆರ್ ಶೆಟ್ಟಿ(71) ಇವರು ಫೆ.23ರಂದು ಹೃಧಯ ಅಪಘಾತದಿಂದಾಗಿ ನಿಧನಹೊಂದಿದರು.ಮೂಲತಃ ಕಾರ್ಕಳದ ಬಜಗೋಳಿ ಯವರುವಾಗಿದ ಮೃತರು . ಪತ್ನಿ ಓರ್ವ ಪುತ್ರಿ ಓರ್ವ ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಶ್ರೀಧರ್ ಶೆಟ್ಟಿ ಅವರು ದೀರ್ಘ ಕಾಲದಿಂದ ಮಲಾಡ್ ಪೂರ್ವ ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಂದಿರದ ಲ್ಲಿ ಕ್ರೀಯಾಶೀಲರಾಗಿದ್ದ ಪೂಜಾ ಸಮಿತಿಯಲ್ಲಿ ವಿವಿಧ ಪದವಿಗಳನ್ನು ಸೇವೆ ಸಲ್ಲಿಸಿ ಅಧ್ಯಕ್ಷರಾಗಿ ಕೂಡ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ ಇವರು ಬಂಟರ ಸಂಘ ಮುಂಬಯಿಯ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯಲ್ಲಿ ಸಕ್ರಿಯರಾಗಿದ್ದರು.
ಇವರ ನಿಧನಕ್ಕೆ ಬಂಟರ ಸಂಘ ಮುಂಬಯಿಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯಲ್ಲಿ ಕಾರ್ಯಧ್ಯಕ್ಷ ರವಿ ಶೆಟ್ಟಿ ಮಾಜಿ ಕಾರ್ಯ ಧ್ಯಕ್ಷ ರುಗಳಾದ ಮುದ್ರಾಡಿ ದಿವಾಕರ ಶೆಟ್ಟಿ. ಗುಣಪಾಲ್ ಶೆಟ್ಟಿಐಕಳ. ಡಾ. ಅರ್ ಕೆ ಶೆಟ್ಟಿ .ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ರು ಶ್ರೀನಿವಾಸ ಸಾಫಲ್ಯ ಹಾಗೂ ಸದಸ್ಯರುಗಳ . ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಅಧ್ಯಕ್ಷ ನ್ಯಾ. ಜಗನ್ನಾಥ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪಾವಯಿ ಕನ್ನಡ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.