Home Kannada ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ 225 ವಿದ್ಯಾರ್ಥಿಗಳಿಗೆ ಕೊರೊನಾ!

ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ 225 ವಿದ್ಯಾರ್ಥಿಗಳಿಗೆ ಕೊರೊನಾ!

by Eha

ಮುಂಬೈ: ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಶುರುವಾಗಿದ್ದು, ಅತಿ ಹೆಚ್ಚು ಕೊರೊನಾ ಕೇಸ್​ಗಳು ಇಲ್ಲಿ ಕಂಡು ಬರುತ್ತಿವೆ. ಇದೀಗ ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ ಬರೋಬ್ಬರಿ 225 ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ. ಮಹಾರಾಷ್ಟ್ರದ ವಾಸೀಂ ಜಿಲ್ಲೆಯ ಶಾಲೆಯೊಂದರ ಹಾಸ್ಟೆಲ್​ನಲ್ಲಿ 225 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು​ ತಗುಲಿದ್ದು, ಇಡೀ ಶಾಲೆಯನ್ನು ಕಂಟೈನ್ಮೆಂಟ್​ ಝೋನ್ ಎಂದು ಗುರುತಿಸಲಾಗಿದೆ. ಈ ಹಾಸ್ಟೆಲ್​​ನಲ್ಲಿ 300 ವಿದ್ಯಾರ್ಥಿಗಳು ವಾಸವಾಗಿದ್ದು, ಹೆಚ್ಚಾಗಿ ಅಮರಾವತಿ, ಯವತ್ಮಾಲ್​, ಅಕೋಲಾದ ವಿದ್ಯಾರ್ಥಿಗಳಿದ್ದಾರೆ.

ಫೆ.14ರಂದು 21 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಗೊಂಡಿತ್ತು. ಇದಾದ ಬಳಿಕ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡು 327 ವಿದ್ಯಾರ್ಥಿಗಳು ಹಾಸ್ಟೆಲ್​​ನಲ್ಲಿ ಉಳಿದುಕೊಂಡಿದ್ದರು. ಕಳೆದ ಒಂದು ವಾರದ ಹಿಂದೆ ಲಾತೂರ್​ ಜಿಲ್ಲೆಯ ಹಾಸ್ಟೆಲ್​ನ 39 ವಿದ್ಯಾರ್ಥಿಗಳು ಹಾಗೂ ಐವರು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಗೊಂಡಿತ್ತು. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಇಲ್ಲಿನ ಸಿಎಂ ಮತ್ತೊಮ್ಮೆ ಲಾಕ್​ಡೌನ್ ಹೇರಿಕೆ ಮಾಡುವ ಬಗ್ಗೆ ಮಾತನಾಡಿದ್ದರು.

Related Posts

Leave a Comment