Home Kannada ಮಹಿಳೆ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮ

ಮಹಿಳೆ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮ

by Eha

ಶಿವಮೊಗ್ಗ: ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್​ನಿಂದ ಹೊರಬರುತ್ತಿದ್ದಂತೆಯೇ ಆಕೆಯ‌ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸಾಗರ ಪಟ್ಟಣದ ಚಾಮರಾಜಪೇಟೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ. ಸುಜಾತ ಎಂಬುವವರು ಚೌಡಮ್ಮ ಬೀದಿಯಲ್ಲಿರುವ ಜೀ ಬ್ಯೂಟಿ ಪಾರ್ಲರ್​ಗೆ ಹೋಗಿ ಹೊರಬರುತ್ತಿದ್ದಂತೆಯೇ ಸ್ಟಾರ್ ಸಿಟಿ ಬೈಕ್​ನಲ್ಲಿ ಬಂದ ಖದೀಮನೊಬ್ಬ, 38 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರಗಳ್ಳತನ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Posts

Leave a Comment