Home Kannada ಮಾರ್ಷಲ್ ಆರ್ಟ್ಸ್ ಕರಾಟೆಯಲ್ಲಿ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ 2021 ಪ್ರಶಸ್ತಿ ಪಡೆದ ಭಾಯಂದರ್ ರಿಷಬ್ ಶೆಟ್ಟಿ.

ಮಾರ್ಷಲ್ ಆರ್ಟ್ಸ್ ಕರಾಟೆಯಲ್ಲಿ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ 2021 ಪ್ರಶಸ್ತಿ ಪಡೆದ ಭಾಯಂದರ್ ರಿಷಬ್ ಶೆಟ್ಟಿ.

by akash

ಸಾಧನೆಗಳಲ್ಲಿ ತುಳುಕನ್ನಡಿಗರು ಅಗ್ರಗಣ್ಯರು. ವೈಜ್ಞಾನಿಕ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ, ರಾಜಕೀಯ ,ಚಿತ್ರರಂಗ,ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ತುಳುಕನ್ನಡಿಗರ ಸಾಧನೆ ಅಪಾರ. ಇದು ನಮ್ಮ ಊರಿನ ನೀರಿನ ಗುಣ ಹಾಗೂ ನಂಬಿದ ದೈವದೇವರುಗಳ ಆಶೀರ್ವಾದ ಎಂದರೆ ತಪ್ಪಾಗದು.ಇದಕ್ಕೆ ಭಾಯಂದರ್ ಪೂರ್ವದ ನವಘರ್ ರಸ್ತೆಯ ಶ್ರೀದಾಮ್ ವಸತಿ ಸಂಕೀರ್ಣದಲ್ಲಿರುವ ಬೈಲೂರು ಎರ್ಲಪಾಡಿ ಬೀರ್ನಗುತ್ತು ಅರುಣ್ ಮಹಾಬಲ ಶೆಟ್ಟಿ ಮತ್ತು ದೊಂಡರಂಗಡಿ ಮತ್ತಾವು ಮನೆ ವಿಮಲಾ ಅರುಣ್ ಶೆಟ್ಟಿ ದಂಪತಿಗಳ ಪುತ್ರ, ಹದಿಮೂರು ವರ್ಷ ಪ್ರಾಯದ ರಿಷಬ್ ಶೆಟ್ಟಿಯೇ ಸಾಕ್ಷಿ. ಕರಾಟೆ ಮಾರ್ಷಲ್ ಆರ್ಟ್ಸ್ ನಲ್ಲಿ ಅತೀ ಹೆಚ್ಚಿನ ಫಲಕ ಮೆಡಲ್ ಪಡೆದ ಹದಿಮೂರು ವರ್ಷ ಪ್ರಾಯದ ಏಕೈಕ ಕರಾಟೆ ಪಟು ಎಂಬ ಹೆಗ್ಗಳಿಕೆಗೆ ಪಾತ್ರನಾಗಿ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ಗಿಟ್ಟಿಸಿಕೊಂಡು ತನ್ನ ಹುಟ್ಟಿದ ಊರು, ತಂದೆತಾಯಿ , ಕಲಿಸಿದ ಗುರು, ಕಲಿಯುತ್ತಿರುವ ಶಾಲೆ ಅಲ್ಲದೆ ರಾಜ್ಯಕ್ಕೇ ಕೀರ್ತಿ ತಂದಿದ್ದಾನೆ಼. ರಿಷಬ್ ನ ಜನನ ಊರಿನಲ್ಲಿ ‌ 2008ರ ಫೆಬ್ರವರಿ 21ರಂದು ಆಯಿತು. ಈಗಿನ ಶಿಕ್ಷಣ ಪದ್ದತಿ ಪ್ರಕಾರ ತನ್ನ ಮೂರುವರೆ ವರ್ಷ ಪ್ರಾಯದಲ್ಲಿ ನರ್ಸರಿಗೆ ಸೇರಿ ಪ್ರಸ್ತುತ 8ನೇ ತರಗತಿಯಲ್ಲಿ ಭಾಯಂದರ್ ಪೂರ್ವದ ಮದರ್ ಥೆರೆಸಾ ಹೈಸ್ಕೂಲಿನಲ್ಲಿ ಈತನ ವಿದ್ಯಾಬ್ಯಾಸ ನಡೆಯುತ್ತಿದೆ. ತನ್ನ ಎಂಟನೇ ವರ್ಷ ಪ್ರಾಯದಲ್ಲಿ ರಿಷಬ್ ನ ನ್ನು ಭಾಯಂದರಿನ ಸ್ಫೋರ್ಟ್ಸ್ ಇಂಡಿಯಾ ಕರಾಟೆ ಅಕಾಡಮಿಗೆ ಕರಾಟೆ ಕಲಿಯಲು (2016) ಸೇರಿಸಲಾಯಿತು.ಕರಾಟೆ ಶಿಕ್ಷಕ ವಿನೋದ್ ಕದಮ್ ರವರ ಮೆಚ್ಚಿನ ಶಿಷ್ಯನಾಗಿ ಪಳಗಿ ತನ್ನ ಪ್ರಥಮ ವರ್ಷದ ತರಬೇತಿಯಲ್ಲೇ ಭಾಯಂದರಿನಲ್ಲಿ ನಡೆದ ಡಿಸ್ಟ್ರಿಕ್ ಲೆವೆಲ್ ಕರಾಟೆ 2017 ರಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಕೀರ್ತಿ ರಿಶಬ್ ಗಿದೆ. ಅದಲ್ಲದೆ ಪಂಜಾಬ್, ದೆಹಲಿ, ಸಾಂಗ್ಲಿ, ಪುಣೆ, ನಾಸಿಕ್, ಪೂನ, ಆಹ್ಮದ್ನಗರ್ ಮುಂತಾದ ಸ್ಥಳಗಳಲ್ಲಿ ನಡೆದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿ ಈ ತನಕ 9 ಟ್ರೋಪಿಗಳು, 56 ಮೆಡಲುಗಳು ಅಲ್ಲದೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅದಲ್ಲದೆ ಕೊರೊನಾ ಸಮಯದಲ್ಲಿ ಆನ್ ಲೈನ್ ಮುಖಾಂತರ ಕರಾಟೆ ತರಬೇತಿ ಪಡೆಯುತ್ತಿದ್ದು ಆನ್ ಲೈನ್ ನಿಂದಲೇ ಇತ್ತೀಚೆಗೆ ಇಂಟರ್ ನ್ಯಾಷನಲ್ ಟಯೋಕೋನ್ ಕೊರಿಯನ್ ಕರಾಟೆ ಸ್ಖರ್ಧೆಯಲ್ಲಿ ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಪಡೆದದ್ದು ದೊಡ್ಡ ಸಾಧನೆಯಾಗಿದೆ. ಹೋಟೇಲು ಕೆಲಸದಲ್ಲಿ ದುಡಿಯುತ್ತಿರುವ ತನ್ನ ತಂದೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿರದ ಕಾರಣ ಕೊರಿಯಾದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದ್ದರೂ ಹೋಗಲಾಗಲಿಲ್ಲ ಎಂಬ ಚಿಂತೆಯಲ್ಲಿದ್ದರೂ ಮುಂದಿನ ದಿನಗಳಲ್ಲಿ ತನ್ನಾಸೆಯನ್ನು ಈಡೇರಿಸುವ ಛಲದಿಂದ ಶ್ರದ್ದೆಯಿಂದ ರಿಷಬ್ ತರಬೇತಿ ಪಡೆಯುತ್ತಿದ್ದು ಮುಂದೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ಸೇರಿಸಲು ತಯಾರಾಗಿದ್ದಾನೆ.ತನ್ನ ತಂಗಿ ಆರನೇ ತರಗತಿಯಲ್ಲಿ ಕಲಿಯುತ್ತಿರುವ ರಿತ್ವಿ ಕೂಡಾ ಈಗಾಗಲೇ ಕರಾಟೆ ತರಬೇತಿ ಆರಂಬಿಸಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲಾ ವಿದ್ಯಾಭ್ಯಾಸದ ಜೊತೆಗೆ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ಮನಸ್ಥೈರ್ಯ ಬೆಳೆಯುವ ಜೊತೆಗೆ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ಎನ್ನುತ್ತಾನೆ ರಿಷಬ್ ಶೆಟ್ಟಿ. ಕ್ರೀಡಾಕ್ಷೇತ್ರದಲ್ಲಿ ಮಿಂಚುತ್ತಿರುವ ರಿಷಬ್ ಗೆ ಅಭಿನಂದಿಸಿ ಈ ಹಿಂದೆ ಭಾಯಿಂದರ್ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಳಿಯು ಮೊದಲಾಗಿ ಸನ್ಮಾನಿಸಿ ಆಶೀರ್ವದಿಸಿದೆ. ಕರ್ನಾಟಕ ಮಹಾಮಂಡಲ ಮೀರಾಭಾಯಂದರ್ ಹಾಗೂ ಬಂಟರ ಸಂಘದ ಮೀರಾಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದಲೂ ಸನ್ಮಾನ ಸಿಕ್ಕಿದೆ. ಅನೇಕ ಸಂಘ-ಸಂಸ್ಥೆಗಳು ರಿಷಬ್ ನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದೆ. ತಂದೆ ತಾಯಿಯ ಪ್ರೋತ್ಸಾಹ, ಶಿಕ್ಷಕ ಕದಮ್ ರವರ ಮಾರ್ಗದರ್ಶನ, ಮಾವ ಶೇಖರ ಶೆಟ್ಟಿ(ಫಿನಾಯಿಲ್), ಶಾಲಾ ಶಿಕ್ಷಕವ್ರಂದ ಹಾಗೂ ಹಿತೈಷಿಗಳ ಬೆಂಬಲಕ್ಕೆ ರಿಷಬ್ ಈ ಮಟ್ಟಕ್ಕೇರಲು ಸಾದ್ಯವಾಯಿತು ಎನ್ನುತ್ತಾನೆ.
ಕೇವಲ ಕರಾಟೆಯಲ್ಲದೆ ವಿದ್ಯಾಭ್ಯಾಸದಲ್ಲೂ ಮಂಚೂಣಿಯಲ್ಲಿದ್ದು, ಶಾಲಾ ಉತ್ತಮ ವಿದ್ಯಾರ್ಥಿ ಪ್ರಶಸ್ತಿ, ಅವ್ಟ್ ಸ್ಟ್ಯಾಂಡಿಂಗ್ ಮಾರ್ಷಲ್ ಆರ್ಟ್ಸ್ ಪ್ರಶಸ್ತಿ ಹಾಗೂ ಶಾಲಾ ಕ್ರೀಡಾ ಪ್ರಶಸ್ತಿ ಪಡೆಯುತ್ತಿರುವ ರಿಷಬ್ ಹೆತ್ತವರ, ಶಿಕ್ಷಕರ, ರಾಜ್ಯದ ಒಟ್ಟಿಗೆ ದೇಶದ ಕೀರ್ತಿಯನ್ನೂ ಬೆಳಗಿಸಲಿ, ಬೆಳಗಲಿ ಎಂಬ ಶುಭಾಶೀರ್ವಾದದೊಂದಿಗೆ ನಾವೆಲ್ಲಾ ಅಭಿನಂದಿಸೋಣ………ಉಮೇಶ್. ಕೆ.ಅಂಚನ್.

Related Posts

Leave a Comment