Home Kannada ಮಾಸ್ಕ್ ಹಾಕು ಅಂದಿದ್ದಕ್ಕೆ ಪಿಡಿಓ ಮೇಲೆ ಇಬ್ಬರು ಯುವಕರಿಂದ ಹಲ್ಲೆ

ಮಾಸ್ಕ್ ಹಾಕು ಅಂದಿದ್ದಕ್ಕೆ ಪಿಡಿಓ ಮೇಲೆ ಇಬ್ಬರು ಯುವಕರಿಂದ ಹಲ್ಲೆ

by akash

ಚಿಕ್ಕಬಳ್ಳಾಪುರ: ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರು ಯುವಕರು ಮಹಿಳಾ ಪಿಡಿಓ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿ-ಪಾಲೇಪಲ್ಲಿ ಮಾರ್ಗಮಧ್ಯೆ ನಡೆದಿದೆ. ಅಂದಹಾಗೆ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಭಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಹಲ್ಲೆಗೆ ಓಳಗಾದವರು. ಶೆಟ್ಟಿಹಳ್ಳಿ ಗ್ರಾಮದ ನವೀನ್ ಹಾಗೂ ಮನೋಹ್ ಹಲ್ಲೆ ಮಾಡಿದ ಪುಂಡರು. ಪಿಡಿಓ ಭಾಗ್ಯಮ್ಮ ಕರ್ತವ್ಯ ನಿಮಿತ್ತ ಪಾಲೇಪಲ್ಲಿ ಗ್ರಾಮಕ್ಕೆ ಹೋಗಿ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ತನ್ನ ಗಂಡನ ಜೊತೆ ಬೈಕ್‍ನಲ್ಲಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಇಬ್ಬರು ಯುವಕರು ಮಾಸ್ಕ್ ಹಾಕದೆ, ಸಾಮಾಜಿಕ ಅಂತರವಿಲ್ಲದೆ ಮಾತನಾಡುತ್ತಿದ್ದು ಕಂಡು ಮಾಸ್ಕ್ ಹಾಕಿ ಅಂತ ಹೇಳಿದ್ದಾರೆ. ಈ ವೇಳೆ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು ಈ ವೇಳೆ ಪಿಡಿಓ ಭಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಮೇಲೆ ಹಲ್ಲೆ ನಡೆಸಲಾಗಿದೆ. ಭಾಗ್ಯಮ್ಮ ಮೂಗಿಗೆ ಗಾಯವಾಗಿದ್ದು, ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾಗ್ಯಮ್ಮ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಇಬ್ಬರು ಯವಕರು ಅಸಭ್ಯ ಅವಾಚ್ಯವಾಗಿ ನನ್ನ ಸೀರೆ ಎಳೆದಾಡಿ ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Related Posts

Leave a Comment