Home Kannada ಮೀರಾಭಾಯಂದರ್ ಹೋಟೆಲ್ಸ್ ಎಸೋಸಿಯೇಶನಿನ ವತಿಯಿಂದ ಫೋಸ್ಟ್ಯಾಕ್ ಮಾಹಿತಿ ಶಿಬಿರ.

ಮೀರಾಭಾಯಂದರ್ ಹೋಟೆಲ್ಸ್ ಎಸೋಸಿಯೇಶನಿನ ವತಿಯಿಂದ ಫೋಸ್ಟ್ಯಾಕ್ ಮಾಹಿತಿ ಶಿಬಿರ.

by akash

ಗ್ರಾಹಕರಿಗೆ ಸ್ವಚ್ಚ ಹಾಗೂ ಗುಣಮಟ್ಟದ ಆಹಾರ ನೀಡುವುದು ಹೋಟೇಲಿಗರ ಗುರಿ… ಮಧುಕರ್ ಕೆ.ಶೆಟ್ಟಿ. ಚಿತ್ರ ವರದಿ: ಉಮೇಶ್ ಕೆ.ಅಂಚನ್.
9324759589 ಮೀರಾರೋಡ್ ಡಿ.3 ಆರೋಗ್ಯದ ಹಿತದೃಷ್ಟಿಯಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಅದರ ಪರಿಪಾಲನೆಯೊಂದಿಗೆ ವ್ಯಾಪಾರ ಮಾಡುವ ಸಂಪೂರ್ಣ ಮಾಹಿತಿಯನ್ನು ನೀಡುವುದಕ್ಕೋಸ್ಕರ ಈ ಶಿಬಿರವನ್ನು ಹೋಟೆಲ್ ಮಾಲಕ, ಚಾಲಕ ಹಾಗೂ ನೌಕರವೃಂದಕ್ಕೆ ಎಸೋಸಿಯೇಶನ್ ಆಯೋಜಿಸಿದೆ. ಇಂದು ಪ್ರಥಮವಾಗಿ 40 ಜನರ ಪಂಗಡಕ್ಕೆ ಇದರ ಉಪಯೋಗವನ್ನು ಕಲ್ಪಿಸಲಾಗಿದ್ದು ಮುಂದೆ ಇದೇ ರೀತಿಯಲ್ಲಿ ಶಿಬಿರದ ಆಯೋಜನೆ ನಡೆಯಲಿದೆ ಎಂದು ಮೀರಾಭಾಯಂದರ್ ಹೋಟೆಲ್ಸ್ ಎಸೋಸಿಯೇಶನಿನ ಅದ್ಯಕ್ಷ ಮಧುಕರ್ ಕೆ. ಶೆಟ್ಟಿ ಹೇಳಿದರು. ಅವರು ಡಿ.2ರಂದು ಮೀರಾರೋಡ್ ಪೂರ್ವದ ಮೈರೇಡ್ ಹೋಟೇಲಿನ ಸಭಾಗ್ರಹದಲ್ಲಿ ಮೀರಾಭಾಯಂದರ್ ಮಹಾನಗರಪಾಲಿಕೆಯ ಫುಡ್ ಎಂಡ್ ಡ್ರಗ್ಸ್ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ್ದ ಫೋಸ್ಟ್ಯಾಕ್ ಮಾಹಿತಿ ಶಿಬಿರದಲ್ಲಿ ಮಾತನಾಡುತ್ತಿದ್ದರು. ಇಂದು ಜನರು ರಸ್ತೆ ಬದಿಯಲ್ಲಿ ತಯಾರು ಇರುವ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಿನ್ನುವ ಬದಲು “ಸ್ವಸ್ತ ಭಾರತ” ಅಭಿಯಾನದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುವುದು, ಹೋಟೇಲುಗಳಲ್ಲಿ ನೈರ್ಮಲ್ಯವನ್ನು ಕಾಪಾಡಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ಕೊಡುವುದು ನಮ್ಮ ಗುರಿ ಎಂದು ಮಧುಕರ್ ಕೆ. ಶೆಟ್ಟಿ ಹೇಳಿದರು. ‘ಫಾರ್ಮ್ ಟು ಫೋರ್ಕ್ ಸೊಲ್ಯೂಶನ್’ ಕಂಪನಿಯ ಅಧಿಕಾರಿ ತೃಪ್ತಿ ಭಟ್ ರವರು ಹೋಟೇಲುಗಳ ಆಹಾರ ತಯಾರಿಕೆ, ಸ್ವಚ್ಚತೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿವರಿಸಿ ಸಂಪೂರ್ಣ ಮಾಹಿತಿ ನೀಡಿದರು. ಶಿಭರದಲ್ಲಿ ಭಾಗವಹಿದವರಿಗೆ ಕಂಪನಿಯ ವತಿಯಿಂದ ಅರ್ಹತಾ ಪತ್ರ ನೀಡಲಾಯಿತು. ಈ ಸಂಧರ್ಭದಲ್ಲಿ ನಗರದ ಫುಡ್ ಎಂಡ್ ಸೇಫ್ಟೀ ಅಧಿಕಾರಿ ಉತ್ತರೇಶ್ವರ್ ಬಡೇ ಆಗಮಿಸಿ ಶಿಬಿರಾರ್ಥಿಗಳಿಗೆ ಇದರ ಸಂಪೂರ್ಣ ಮಾಹಿತಿ ಇಂದಿನ ವ್ಯವಹಾರಕ್ಕೆ ಬಹಳ ಅಗತ್ಯ ಎಂದು ಹೇಳಿ ಎಲ್ಲರೂ ಶಿಬಿರದಲ್ಲಿ ತಿಳಿಸಿದ ನಿಯಮಗಳನ್ನು ಪರಿಪಾಲಿಸಬೇಕೆಂದರು. ಎಸೋಸಿಯೇಶನಿನ ಗೌರವ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಹಾಸ್ ಕೆ.ಶೆಟ್ಟಿ ವಂದಿಸಿದರು. ಅನಿಲ್ ಶೆಟ್ಟಿ(ಜತೆ ಕೋಶಾಧಿಕಾರಿ), ಹರೀಶ್ ಶೆಟ್ಟಿ, ಜೀವನ್ ಶೆಟ್ಟಿ, ಮೋಹನ್ ಶೆಟ್ಟಿ (ಉಪಾಧ್ಯಕ್ಷ), ಪ್ರಕಾಶ್ ನಡಿಬೈಲು ನಾಗೇಶ್ ಶೆಟ್ಟಿ ಸಹಕರಿಸಿದರು. ಶಿಬಿರವು ಬೆಳಿಗ್ಗೆ 10ರಿಂದ ಸಾಯಂಕಾಲ 6 ಗಂಟೆಯ ತನಕ ನಡೆಯಿತು.

Related Posts

Leave a Comment

Translate »