Home Kannada ಮೀರಾಭಾಯಿಂದರ್ ಬಿಜೆಪಿ ಜಿಲ್ಲಾ ಕಛೇರಿಗೆ ಕರ್ನಾಟಕ ರಾಜ್ಯ ಪಶುಸಂಗೋಪನಾ ಸಚಿವರ ಬೇಟಿ.

ಮೀರಾಭಾಯಿಂದರ್ ಬಿಜೆಪಿ ಜಿಲ್ಲಾ ಕಛೇರಿಗೆ ಕರ್ನಾಟಕ ರಾಜ್ಯ ಪಶುಸಂಗೋಪನಾ ಸಚಿವರ ಬೇಟಿ.

by akash

ದೇಶದ ಪ್ರಗತಿ ,ರಕ್ಷಣೆ, ಗೋವು ಆಧಾರಿತ ಕೃಷಿ ಸಂರಕ್ಷಣೆ ನಮ್ಮೆಲ್ಲರ ಧ್ಯೇಯ … ಪ್ರಭು ಚವಾಣ್. ಚಿತ್ರ ವರದಿ: ಉಮೇಶ್ ಕೆ.ಅಂಚನ್.9324759589. ಸರಕಾರದ ವತಿಯಿಂದ ವಾರ್ಷಿಕ 2500 ಕೋಟಿ ಬಜೆಟ್ ಮೀಸಲಿಟ್ಟು ಗೋರಕ್ಷಣೆಗಾಗಿ ಮೊದಲ ಹಂತದಲ್ಲಿ 15 ಕೋಟಿ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಸರಕಾರಿ ಗೋಶಾಲೆ , ಆಸ್ಪತ್ರೆ ಹಾಗೂ ಪಶು ಸಂಜೀವಿನಿ ಸಂಚಾರಿ ಅಂಬುಲೆನ್ಸ್ ವಾಹನಗಳನ್ನು ಆರಂಬಿಸಲಾಗುವುದು .ಗೋಶಾಲೆಗಳಲ್ಲಿ ಗೋಉತ್ಪನ್ನ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದೀಗ ಆರಂಭಗೊಂಡ ಪ್ರಾಣಿಕಲ್ಯಾಣ ಸಹಾಯವಾಣಿಯ ಮುಖಾಂತರ ರೈತರು ತಮ್ಮ ಜಾನುವಾರುಗಳ ಆರೋಗ್ಯ ಮತ್ತು ಇನ್ನಿತರ ಸಮಸ್ಯೆಗಳಿಗೆ ದಿನದ 24 ಗಂಟೆಗಳಲ್ಲೂ ತ್ವರಿತ ಪರಿಹಾರ ಪಡೆದು ಕೊಳ್ಳಬಹುದು. ಗೋಹತ್ಯೆ ಮಾಡಿದವರ ಸಜೆಯನ್ನು ಜಾಮೀನು ರಹಿತ ಮಾಡಿ ದಂಡದ ಮೊತ್ತವನ್ನು ಏರಿಸಲಾಗಿದೆ. ಈ ಕಾರ್ಯದ ಸಫಲತೆಗೆ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಸೇವೆ ನೀಡುತ್ತಿದ್ದಾರೆ. ದೇಶದ ಪ್ರಗತಿ ,ರಕ್ಷಣೆ, ಗೋವು ಆಧಾರಿತ ಕೃಷಿ ಸಂರಕ್ಷಣೆ ನಮ್ಮೆಲ್ಲರ ಧ್ಯೇಯ ಎಂದು ಕರ್ನಾಟಕ ಸರಕಾರದ ಔರಾದ್ ಕ್ಷೇತ್ರದ ಶಾಸಕರು, ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಹೇಳಿದರು. ಅವರು ಗೋವು ಆಧಾರಿತ ಕೃಷಿಯ ಅಧ್ಯಯನಕ್ಕಾಗಿ ಮೀರಾ ಭಾಯಂದರ್ ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಶವ ಸೃಷ್ಟಿ ಗೋಶಾಲೆಗೆ ಬೇಟಿ ಕೊಡುವ ಸಂದರ್ಭದಲ್ಲಿ ಮೀರಾಭಾಯಿಂದರ್ ಬಿಜೆಪಿ ಜಿಲ್ಲಾ ಕಛೇರಿಗೆ ಬೇಟಿ ನೀಡಿ ಜಿಲ್ಲಾ ಬಿಜೆಪಿ ಸಮಿತಿಯ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಧನ್ಯವಾದ ಸಮರ್ಪಿಸಿ ಮಾತನಾಡುತ್ತಿದ್ದರು. ತನ್ನ ರಾಜಿಕೀಯ ಜೀವನವನ್ನು ಮುಂಬೈ ಠಾಣಾ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಆರಂಭಿಸಿದ ಪ್ರಭು ಚವಾಣ್ ಮುಂದಿನ ರಾಜಕೀಯ ಜೀವನವನ್ನು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದಿಂದ ಪ್ರಾರಂಭಿಸಿ ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗಿ ಇದೀಗ ಕರ್ನಾಟಕ ಸರಕಾರದ ಪಶು ಸಂಗೋಪನಾ ಸಚಿವರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಚ್ಚಿದಾನಂದ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿಸಿ ಮಾತನಾಡುತ್ತಾ ಗೋಹತ್ಯಾ ನಿಷೇದ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿ, ಜಿಲ್ಲೆಗೊಂದು ಗೋಶಾಲೆಗಳ ಸ್ಥಾಪನೆ ಹಾಗೂ ವೈದ್ಯಕೀಯ ಅಂಬುಲೆನ್ಸ್ ಮುಂತಾದ ಸೇವೆ ಒದಗಿಸಿ ಕರ್ನಾಟಕ ರಾಜ್ಯದ ಬಿಜೆಪಿ ಕಾರ್ಯರ್ತರ,ಗೋ ಪ್ರೇಮಿಗಳ ಮನೋಬಲ ಹೆಚ್ಚಿಸಿದ ಸಚಿವರು ಇಂದು ಮೀರಾ ಭಯಂದರ್ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ಕೊಟ್ಟು ಸ್ಥಳೀಯ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿದುದಕ್ಕಾಗಿ ಹೃದಯಾಂತರಾಳದ ಧನ್ಯವಾದಗಳನ್ನು ಅರ್ಪಿಸಿದರು .ಸಚಿವರ ಗೋ ಪ್ರೇಮ ಮತ್ತು ಕಾರ್ಯ ವೈಖರಿಯನ್ನು ಪ್ರಶಂಶಿಸಿ ಸರ್ವರನ್ನೂ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ಬಿಜೆಪಿ ಅಧ್ಯಕ್ಷ ಅಡ್ವೋಕೇಟ್ ರವಿ ವ್ಯಾಸ್ ರವರು ಮಾತನಾಡಿ ಸಚಿವರ ಆಗಮನ ಹಾಗೂ ಸಲಹೆ ಸೂಚನೆಗಳಿಂದ ಉಭಯ ರಾಜ್ಯಗಳ ಭಾಂದವ್ಯ ಗಟ್ಟಿಯಾಗುತ್ತದೆ. ದೇಶದ ಪ್ರಗತಿ ಮತ್ತು ಜನರ ಹಿತಕ್ಕಾಗಿ ಕಾರ್ಯ ಪ್ರವಕ್ತರಾಗೋಣ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸಚಿವರು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ರವಿ ವ್ಯಾಸ್ ರವರನ್ನು ಕಾರ್ಯಕರ್ತರ ಸಮಕ್ಷಮದಲ್ಲಿ ಅಭಿನಂದಿಸಿ ಗೌರವಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ವ್ಯಾಸ್ ,ಉಪಾಧ್ಯಕ್ಷ ಸಚ್ಚಿದಾನಂದ್ ಶೆಟ್ಟಿ , ದಕ್ಷಿಣ ಭಾರತೀಯ ಬಿಜೆಪಿ ಘಟಕದ ಸಂಯೋಜಕ ಅರುಣ್ ಶೆಟ್ಟಿ ಪಣಿಯೂರು , ತುಂಗಾಗ್ರೂಪ್ ಆಫ್ ಹಾಸ್ಪಿಟಲಿನ ಮುಖ್ಯ ಕಾರ್ಯ ನಿರ್ದೇಶಕ ಡಾ.ಸತೀಶ್ ಶೆಟ್ಟಿ, ಮೀರಾರೋಡ್ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ ಭಟ್, ವಿದ್ವಾನ್ ರಾಧಾಕೃಷ್ಣ ಭಟ್, ಮೀರಾಭಾಯಿಂದರ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಗ್,ಸಂಘಟನಾ ಕಾರ್ಯದರ್ಶಿ ಅನಿಲ್ ಬೋಸ್ಲೆ ಸಚಿವರನ್ನು ಮೈಸೂರು ಪೇಟ ಶಾಲು ತೊಡಿಸಿ ಫಲಪುಷ್ಪ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆ ನೀಡಿ ಗೌರವಿಸಿದರು. ಹಾಗೂ ಸಮಾಜ ಸೇವಕಿಯಾರಾದ ವಸಂತಿ ಶೆಟ್ಟಿ, ಸುಜಾತಾ ಕೋಟ್ಯಾನ್, ಲೀಲಾ ಗಣೇಶ್ ಪೂಜಾರಿ ಸಂಗಡಿಗರು ಗೋಪ್ರತಿಮೆ, ಫಲಪುಷ್ಪ ನೀಡಿ ಸತ್ಕರಿಸಿದರು. ಆರಂಭದಲ್ಲಿ ಸಚಿವರನ್ನು ಸಾಂಪ್ರದಾಯಿಕ ವಾದ್ಯಮೇಳ ಮತ್ತು ಮಹಿಳೆಯರ ಆರತಿಯೊಂದಿಗೆ ಬರಮಾಡಿಕೊಳ್ಳಲಾಯಿತು. ಸಮಾರಂಭದಲ್ಲಿ ತುಳು ಕನ್ನಡಿಗ ರಾಜಕೀಯ ನೇತಾರರು, ಉದ್ಯಮಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡಾ.ನೈನಾ ವಸಾನಿ ನಿರೂ‌ಪಿಸಿದರು.(ಉಮೇಶ್ ಕೆ ಅಂಚನ್..9324759589)

Related Posts

Leave a Comment

Translate »