Home Kannada ಮುಂಬೈಯ ಯುವ-ಉದ್ಯಮಿ ಜಗದೀಶ್ ಕಾಂಚನ್ ಅವರಿಗೆ ಸಾಧಕ ಪ್ರಶಸ್ತಿಯೊಂದಿಗೆ ಗೌರವ

ಮುಂಬೈಯ ಯುವ-ಉದ್ಯಮಿ ಜಗದೀಶ್ ಕಾಂಚನ್ ಅವರಿಗೆ ಸಾಧಕ ಪ್ರಶಸ್ತಿಯೊಂದಿಗೆ ಗೌರವ

by akash

ಮುಂಬೈ ;ಮೊಗವೀರ ಬ್ಯಾಂಕ್ ನ ನಿರ್ದೇಶಕ, ಹಾಗೂ 9 ಹ್ಯಾಂಡ್ಸ್ ಫೌಂಡೇಶನ್ ಸಂಸ್ಥೆಯ ಕಾರ್ಯಕರ್ತರು . ಯುವ-ಉದ್ಯಮಿ ಜಗದೀಶ್ ಕಾಂಚನ್, ಅವರಿಗೆ “ನಾನು ನನ್ನ ಸಾಧನೆ” ಎಂಬ ಯೋಜನೆ ವತಿಯಿಂದ ಸಾಧಕ ಪ್ರಶಸ್ತಿ ಯನ್ನು ಬೆಂಗಳೂರು ಗಾರ್ಡನಿಯ ಹೋಟೆಲ್ನಲ್ಲಿ ಜರಗಿದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಡೆದರು. ಕರ್ನಾಟಕ ರಾಜ್ಯ ಇಂಧನ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಮತ್ತು ಖ್ಯಾತ ಸಿನೆಮಾ ನಟ ರಮೇಶ್ ಅವರು ಪ್ರಶಸ್ತಿಯನ್ನು ನವಂಬರ್ 23ರಂದು ಪ್ರಧಾನ ಮಾಡಿದರು.   .ಜಗದೀಶ್ ಅಂಚನ್ ಸಾಧನೆಯ ಹಾದಿಗಳು ಸುಲಭವಾಗಿದ್ದಲ್ಲ.ಇದರ ಮಧ್ಯೆ ಸೋಲು,ಅವಮಾನಗಳು ,ಹಲವಾರು ರೀತಿಯ ಸಂಕಷ್ಟಗಳು ಎದುರಾಗುತ್ತವೆ.ಇದನ್ನೆಲ್ಲ ಮೆಟ್ಟಿ‌ ನಿಂತಾಗ ಮಾತ್ರ ನಾವು ಸಾಧನೆಯ ಪತದತ್ತ ಸಾಗಲು ಸಾಧ್ಯ.ಇದರೊಟ್ಟಿಗೆ ನಮ್ಮೊಂದಿಗೆ ಇರುವವರ ಬೆಂಬಲವೂ ಅತ್ಯಗತ್ಯ.ಸಾಧಿಸುವ ಛಲವೊಂದಿದ್ದರೆ ಮನುಷ್ಯ ಏನನ್ನು ಬೇಕಾದರೂ ಸಾಧಿಸಬಹುದು.ಆತನ ಸಾಧನೆಗೆ ಹಣೆಬರಹವೊಂದೇ ನಂಬಿಕೆಯಲ್ಲ.ಆತನ ಕೆಲಸದಲ್ಲಿ ನಂಬಿಕೆ ಹಾಗೂ ನಿಷ್ಟೆ ಆತನನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ಯುತ್ತದೆ.ಸಾಧನೆಯ ಈ ಪಂಕ್ತಿಗೆ ಉದಾಹಣೆಯಾಗಿ ನಿಂತವರು ಜಗದೀಶ್ ಜಯರಾಮ್ ಕಾಂಚನ್. ಹೆಜಮಾಡಿ ಗ್ರಾಮದ ಉಡುಪಿ ತಾಲೂಕಿನ l ಯಶೋಧ ಶ್ರೀಯಾನ್ ಹಾಗೂ ಶ್ರೀ ಜಯರಾಮ್ ಕಾಂಚನ್ ದಂಪತಿಯ ಮೂವರು ಮಕ್ಕಳಲ್ಲಿ ಎರಡನೆ ಮಗನಾಗಿ ಜನಿಸಿದ ಜಗದೀಶ್ ಕಾಂಚನ್ ತನ್ನ ಪ್ರಾಥಮಿಕ ವಿಧ್ಯಾಭ್ಯಾಸ ವನ್ನು ತನ್ನ ಹುಟ್ಟೂರಿನ ಸರಕಾರಿ ಪ್ರಾಥಮಿಕ ಶಾಲೆ ಹೆಜಮಾಡಿ ಕೋಡಿ ಹಾಗೂ ಮುಂದಿನ  ವಿಧ್ಯಾಭ್ಯಾಸ ವನ್ನು ವಿಜಯಾ ಕಾಲೇಜ್ ಮುಲ್ಕಿಯಲ್ಲಿ ಡಿಗ್ರಿಯನ್ನು ಪಡೆದು ,ತದನಂತರ ತನ್ನ ಹೊಟ್ಟೆಪಾಡಿಗಾಗಿ 2004 ನೇ ಇಸವಿಯಲ್ಲಿ ಮಹಾನಗರಿ ಮುಂಬೈಯತ್ತ ಮುಖ ಮಾಡಿದರು.ನಂತರದ ದಿನಗಳಲ್ಲಿ  ಶಿಪ್ಪಿಂಗ್ ಕಂಪೆನಿಯಲ್ಲಿ  ಜೀವನ ಪ್ರಾರಂಭಿಸಿದ ಇವರು ನಂತರ  ಸಾಯಿನಾಥ್ ಫಾರ್ವರ್ಡ್ ನಲ್ಲಿ  ಕಡಿಮೆ ಸಂಬಳಕ್ಕೆ ದುಡಿಮೆ ಆರಂಭಿಸಿದರು.ಅಲ್ಲಿಯೂ ಕಾಲಕ್ರಮೇಣ ಇವರ ಕೆಲಸ ಕೈಜಾರಿ ಹೋಯಿತು. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಕೈಯಲ್ಲಿ ಹಣವಿಲ್ಲ ,ಮುಂದೇನು ಜೀವನ ಎಂದು ಯೋಚಿಸಿ   ಕುಳಿತು ಯೋಚಿಸಿದಾಗ ಸಂತ ಉದ್ಯೋಗ   FMI ಸಣ್ಣ ಕಂಪೆನಿಯನ್ನು  ಆರಂಭಿಸಿದರು.ಇದು ಆ ಸಮಯದಲ್ಲಿ ಬ್ರ್ಯಾಂಡ್ ಆಗಿರಲಿಲ್ಲ.ಕೇವಲ‌ ಮೂರು ನಾಲ್ಕು ಜನರಿಂದ ಆರಂಭಿಸಿದ ಈ ಸಣ್ಣ ಕಂಪೆನಿಯಲ್ಲಿ 60 ರಿಂದ 70 ಜನರಿಗೆ ದುಡಿಯಲು ಸಹಕಾರಿಯಾಯಿತು.FmI interior 250project, realestate ,Architectur ಎಂಬ ಗ್ರೂಪ್ ಆರಂಭಿಸಿ, ಇಂದು  ಕಂಪೆನಿಯು ಮುಂಬಯಿ,ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಇದರ ಬ್ರಾಂಚ್ ಆರಂಭವಾಗಿದ್ದು ಬಹಳ ಪ್ರಸಿದ್ದಿಯನ್ನು ಪಡೆದಿದೆ       .ಗೋಲ್ಡ್ ಪಿಂಚ್,ನಾರ್ತನ್ ಸ್ಕೈ,ರೋಹನ್ ಕಾರ್ಪೋರೇಷನ್ ನಂತಹ ದೊಡ್ಡ ದೊಡ್ಡ ಬಿಲ್ಡರ್ಸ್ ರವರೊಂದಿಗೆ ಕೈಜೋಡಿಸಿ ಕಾರ್ಯ ನಡೆಸುತ್ತಿದೆ. ಹಾಗೂ Architecture ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿದ ಇವರನ್ನು ಇತ್ತೀಚೆಗೆ News 1st television ಚಾನೆಲ್ನವರು ಗುರುತಿಸಿ ,ನಾನು ನನ್ನ ಸಾಧನೆ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.  ಮುಕೇಶ್ ಬಂಗೇರ

Related Posts

Leave a Comment

Translate »