Home Kannada ಮುಷ್ಕರ ನಿರತ 20 ಸಾರಿಗೆ ನೌಕರರು ಪೊಲೀಸರ ವಶಕ್ಕೆ

ಮುಷ್ಕರ ನಿರತ 20 ಸಾರಿಗೆ ನೌಕರರು ಪೊಲೀಸರ ವಶಕ್ಕೆ

by akash

ಧಾರವಾಡ: ಕೊರೊನಾ ಮಧ್ಯೆ ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡಿದ್ದು, ಪ್ರತಿಭಟನಾ ನಿರತ ನೌಕರರನ್ನು ನಗರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು. ಈ ವೇಳೆ ಸಾರಿಗೆ ನೌಕರರ ಮುಖಂಡ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಸಾರಿಗೆ ನೌಕರರು ಜೈಲ್ ಭರೋ ನಡೆಸಲು ಮುಂದಾದರು. ಬಳಿಕ ಪೊಲೀಸರು 20ಕ್ಕೂ ಹೆಚ್ಚು ಸಾರಿಗೆ ನೌಕರರನ್ನು ವಶಕ್ಕೆ ಪಡೆಯಬೇಕಾಯಿತು. ಬಂಧನಕ್ಕೂ ಮುನ್ನ ಮಾತನಾಡಿದ ನೌಕರರ ಮುಖಂಡ ನೀರಲಕೇರಿ, ಸರ್ಕಾರ ನಮ್ಮ ಹೋರಾಟ ದಮನ ಮಾಡಲು ಮುಂದಾಗುತ್ತಿದೆ. ಸಿಎಂ ಮಾತುಕತೆಗೆ ಕರೆಸಿ ಸಂಧಾನ ಮಾಡಲಿ. ಸರ್ಕಾರ ಐಸಿಯುನಲ್ಲಿದೆ, ಜನರ ಜವಾಬ್ದಾರಿ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನೀರಲಕೇರಿ ಹೇಳಿದರು.

Related Posts

Leave a Comment