Home Kannada ಮೃತದೇಹದ ಪತ್ತೆಗೆ ಸಹಕರಿಸಿ: ಕಡಬ ಪೊಲೀಸರಿಂದ ಮನವಿ

ಮೃತದೇಹದ ಪತ್ತೆಗೆ ಸಹಕರಿಸಿ: ಕಡಬ ಪೊಲೀಸರಿಂದ ಮನವಿ

by Eha

ಕಡಬ: ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಕೋಟೆ ಸಾರು ನದಿಯಲ್ಲಿ ಸುಮಾರು 65 ರಿಂದ 70 ವಯಸ್ಸಿನ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಶವ ಪತ್ತೆಯಾಗಿದ್ದು, ಗುರುತು ಪತ್ತೆಗೆ ಸಹಕರಿಸುವಂತೆ ಕಡಬ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲಿ ಹಾಗೂ ಕೈಯಲ್ಲಿ ಕನ್ನಡಕ ಇರುವುದು ಕಂಡು ಬಂದಿತ್ತು. ಕೆಂಪು ಬಣ್ಣದ ರವಿಕೆ ಮತ್ತು ಬಿಳಿ ಸೀರೆ ತೊಟ್ಟಿದ್ದು, ಹಣೆಯಲ್ಲಿ ಕೆಂಪು ಬೊಟ್ಟು ಧರಿಸಿದ್ದಾರೆ. ಮೃತರು ಯಾರು ಎಂಬುದು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ದೇರಳಕಟ್ಟೆಯ ಮೆಡಿಕಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಇವರ ಬಗ್ಗೆ ಮಾಹಿತಿ ಇರುವವರು ಕಡಬ ಪೊಲೀಸ್ ಠಾಣೆಯ 08251-260044 ನಂಬರ್​ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Related Posts

Leave a Comment