ಮೈಸೂರು: ಸ್ವಿಗ್ಗಿ ಕಂಪನಿಯಲ್ಲಿ ಫುಡ್ ಡಿಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿಕುಮಾರ್ ಎಂಬಾತನ ಮೇಲೆ ಬುಧವಾರ ರಾತ್ರಿ ಬನ್ನಿಮಂಟಪದ ಬಳಿ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಾತ್ರಿ 10ರ ಸಮಯದಲ್ಲಿ ಮನೆಯೊಂದಕ್ಕೆ ಆಹಾರ ನೀಡಿ ವಾಪಸ್ ಬರುತ್ತಿರುವಾಗ ಹೈವೇ ವೃತ್ತದ ಸಮೀಪ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಇವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಆ ಇಬ್ಬರು ದುಷ್ಕರ್ಮಿಗಳು ತಲೆಯ ಹಿಂಭಾಗಕ್ಕೆ ಬಲವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿ ಬಿದ್ದ ಇವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಹಲ್ಲೆ ನಡೆಸಿದವರು ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.