Home Kannada ಮೈಸೂರು ಬಳಿ ಕೇರಳ ಚಿನ್ನದ ವ್ಯಾಪಾರಿಯಿಂದ ಕೋಟಿ ರೂಪಾಯಿ ದರೋಡೆ ಮಾಡಿ ಎಸ್ಕೇಪ್​ ಆದ ಕಳ್ಳರು!

ಮೈಸೂರು ಬಳಿ ಕೇರಳ ಚಿನ್ನದ ವ್ಯಾಪಾರಿಯಿಂದ ಕೋಟಿ ರೂಪಾಯಿ ದರೋಡೆ ಮಾಡಿ ಎಸ್ಕೇಪ್​ ಆದ ಕಳ್ಳರು!

by Eha

ಮೈಸೂರು: ಕೇರಳದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ಫಿಲಂ ಸ್ಟೈಲ್​ನಲ್ಲಿ ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳದ ಕಣ್ಣೂರು ಜಿಲ್ಲೆಯ ಭಾನುರಿನ ಸ್ವಪ್ನ ಜ್ಯುವೇಲರ್ಸ್​​​​ ಮಾಲೀಕ ಚಿನ್ನದ ವ್ಯಾಪಾರಿ ಸುರಜ್ ಮಾರ್ಚ್​ 15ಕ್ಕೆ ಬೆಂಗಳೂರಿಗೆ ಬಂದು ಚಿನ್ನವನ್ನು ಮಾರಿದ್ದಾರೆ. ಬಳಿಕ ಆ ದಿನ ರಾತ್ರಿ ಬೆಂಗಳೂರಿನಿಂದ ಕೇರಳಕ್ಕೆ ಹೊರಟ್ಟಿದ್ದಾರೆ. ಮಾರ್ಚ್​ 15-16 ರ ಮಧ್ಯ ರಾತ್ರಿ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದಾಗ ಹುಣಸೂರು ಮತ್ತು ಮಡಿಕೇರಿ ಹೆದ್ದಾರಿಯ ಯಶೋಧರಪುರ ಎಂಬಲ್ಲಿ ಬಹಿರ್ದೆಸೆಗೆ ಎಂದು ಕಾರಿನಿಂದ ಇಳಿದಿದ್ದಾರೆ. ಈ ವೇಳೆ, ಎರಡು ಇನೋವಾ ಕಾರಿನಲ್ಲಿ ಬಂದ ಆರೇಳು ಜನ ಅವರ ಬಳಿಯಿದ್ದ ಕೋಟಿ ಹಣವನ್ನು ದರೋಡೆ ಮಾಡಿದ್ದಾರೆ.

ಕಾರಿನ ಚಾಲಕ ಸುಭಾಷ್ ಮತ್ತು ಚಿನ್ನದ ವ್ಯಾಪಾರಿ ಸುರಜ್​ ಮೇಲೆ ದರೋಡೆಕೋರರು ಹಲ್ಲೆ ಮಾಡಿ ಫೋನ್​ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಅವರಿಬ್ಬರನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಚಿನ್ನದ ಅಂಗಡಿಯ ಮಾಲೀಕ ಹಾಗೂ ವಾಹನ ಚಾಲಕ ಸ್ಥಳೀಯರ ಸಹಾಯದಿಂದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆದ್ರೆ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಹುಣಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Comment