Home Kannada ಮೋಹನ ತರಂಗ’ ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ!

ಮೋಹನ ತರಂಗ’ ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ!

by akash

ಮುಂಬೈ ಕವಿ ಅನಿತಾ ಪಿ. ತಾಕೊಡೆ ಅವರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಕುರಿತು ಬರೆದ, ‘ಮೋಹನ ತರಂಗ’ ಕೃತಿಗೆ 2019-20 ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 25000 ನಗದು ಪುರಸ್ಕಾರ ಲಭಿಸಿದೆ. ಪ್ರಸಿದ್ಧ ರಂಗ ಸಾಧಕ ಮೋಹನ್ ಮಾರ್ನಾಡರ ಜೀವನ ಕಥನವಾಗಿ 2019 ರಲ್ಲಿ ಪ್ರಕಟಗೊಂಡ ಈ ಕೃತಿಯು ಹಲವು ವಿಮರ್ಶಕರಿಂದ ವಿಮರ್ಶೆಗೊಳಪಟ್ಟು, ಒಳ ಮತ್ತು ಹೊರ ನಾಡಿನ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಅನಿತಾ ಅವರ ಸೃಜನಶೀಲತೆ ಹಾಗೂ ಮಾರ್ನಾಡರ ಜೀವನ ಸಾಧನೆಯ ಯಶಸ್ಸಿಗೆ ಪ್ರಸ್ತುತ ಸರಕಾರದ ಮೇರು ಪುರಸ್ಕಾರ ದೊರಕಿರುವುದು ಮುಂಬೈ ಕನ್ನಡ ಸಾಹಿತ್ಯಲೋಕಕ್ಕೆ ಹೊಸ ಹಿರಿಮೆಯನ್ನು ಮೂಡಿಸಿದೆ!
ಮೂಲತಃ ಮೂಡಬಿದರೆಯ ತಾಕೊಡೆಯವರಾದ ಅನಿತಾ ಅವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆಯುವುದರ ಮೂಲಕ ‘ಎಂ. ಬಿ. ಕುಕ್ಯಾನ್ (2017-19)’ ಬಂಗಾರದ ಪದಕ ಗಳಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಇವರು ಪ್ರತಿಭಾವಂತ ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿಗೆ, ಡಾ. ಬಿ. ಜನಾರ್ದನ ಭಟ್ ಅವರ ‘ಜೀವನ ಸಾಧನೆ ಶೋಧ’ ಎಂಬ ವಿಷಯವಾಗಿ ಬರೆದ ಸಂಪ್ರಬಂಧ, ‘ಸವ್ಯಸಾಚಿ’ ಕೃತಿಯಾಗಿ ಬೆಳಕು ಕಂಡಿದೆ.

ಅನಿತಾ ಅವರು, 2019 ರಲ್ಲಿ ಮೈಸೂರು ಅರಮನೆಯ ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. ಜಗಜ್ಯೋತಿ ಕಲಾವೃಂದ(ರಿ)ದಿಂದ ‘ಶ್ರೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ’ ಶಿಕಾರಿಪುರದ ಜನಸ್ಪಂದನ ಟ್ರಸ್ಟ್(ರಿ)ನ, ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ ಪ್ರಜಾವಾಣಿ ಪತ್ರಿಕೆಯ ‘ಪ್ರೇಮಪತ್ರ ಸ್ಪರ್ಧೆ’ಯಲ್ಲಿ ಪ್ರಥಮ ಬಹುಮಾನ(೨೦೧೮) ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಏರ್ಪಡಿಸಿದ ಕೆ. ಎಸ್. ನ, ನೆನಪಿನ ಪ್ರೇಮ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮ ಕಾವ್ಯ ಪುರಸ್ಕಾರ(೨೦೧೧, ೨೦೧೫), ೨೦೧೭ರಲ್ಲಿ ‘ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ’ ಮಹಾರಾಷ್ಟç ನವಚಿಂತನ ಸಂಸ್ಥೆಯಿಂದ, ‘ಕವಿರತ್ನ ಪುರಸ್ಕಾರ(೨೦೧೨-೧೩)’ ಮುಂಬಯಿ ಕಲಾಜಗತ್ತು ಸಂಸ್ಥೆಯಿAದ, ‘ದಿ. ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ(೨೦೧೩)’ ಡೊಂಬಿವಲಿ ತುಳುಕೂಟದಿಂದ ‘ತುಳುಸಿರಿ’ಪ್ರಶಸ್ತಿ(೨೦೧೩)’ ‘ಕಾವ್ಯಸಿರಿ ಪ್ರಶಸ್ತಿ (೨೦೧೯)’ ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ‘ಅಪ್ಪ ನೆಟ್ಟ ಸೀತಾಫಲದ ಮರ’ ಕಥೆಗೆ ಸಂಕ್ರಮಣ ಸಾಹಿತ್ಯ ಬಹುಮಾನ(೨೦೧೭). ಅಂತರಂಗದ ಮೃದಂಗ ಕೃತಿಗೆ, ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯ ಸಾಹಿತ್ಯ ಸಂಸ್ಥೆಯಿಂದ ‘ಸೃಜನಶೀಲ ಸಾಹಿತಿ ಪ್ರಶಸ್ತಿ-೨೦೨೦’ ಹೀಗೆ ಇವರ ಬರಹಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅನಿತಾ ರವರು ಪ್ರಸ್ತುತ ಸೃಜನಾ ಲೇಖಕಿಯರ ಬಳಗ ಮುಂಬೈ ಇದರ ಜೊತೆ ಕೋಶಾಧಿಕಾರಿಯಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.

Related Posts

Leave a Comment