Home Kannada ಮ್ಯಾನ್‍ಹೋಲ್‍ಗೆ ಬಿದ್ದ ಬಾಲಕ- ರಕ್ಷಣೆಗೆ ಹೋದ ನಾಲ್ವರು ದುರ್ಮರಣ

ಮ್ಯಾನ್‍ಹೋಲ್‍ಗೆ ಬಿದ್ದ ಬಾಲಕ- ರಕ್ಷಣೆಗೆ ಹೋದ ನಾಲ್ವರು ದುರ್ಮರಣ

by Eha

ಲಕ್ನೋ: ಮ್ಯಾನ್‍ಹೋಲ್‍ಗೆ ಬಿದ್ದ 10 ವರ್ಷದ ಬಾಲಕನ ರಕ್ಷಣೆಗೆ ಹೋದವರು ಸೇರಿ ಐವರು ದುರ್ಮರಣವಾಗಿರುವ ಘಟನೆ ಆಗ್ರಾದ ಫತೇಹಾಬಾದ್‍ನಲ್ಲಿ ನಡೆದಿದೆ. ಮೃತರನ್ನು ಅನುರಾಗ್(10), ಸೋನು(25) ರಮ್ ಖಿಲಾಡಿ, ಹರಿಮೋಹನ್(16) ಅವಿನಾಶ್(12) ಆಗಿದ್ದಾರೆ. ಮ್ಯಾನ್ ಹೋಲ್‍ಗೆ ಬಿದ್ದ ಬಾಲಕನ ರಕ್ಷಣೆಗೆ ಎಂದು ಹೋದವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. 10 ವರ್ಷದ ಬಾಲಕ ಆಟವಾಡುತ್ತಿದ್ದಾಗ ಆಯತಪ್ಪಿ ಮ್ಯಾನ್‍ಹೋಲ್‍ಗೆ ಬಿದ್ದಿದ್ದಾನೆ. ಈತನ ರಕ್ಷಣೆಗೆಂದು ನಾಲ್ವರು ಇಳಿದಿದ್ದಾರೆ. ಈ ವೇಳೆ ಅಲ್ಲಿನ ವಿಷಕಾರಿ ಅನಿಲದಿಂದಾಗಿ ಪ್ರಾಣಬಿಟ್ಟಿದ್ದಾರೆ. ಗ್ರಾಮಸ್ಥರು ಟ್ಯಾಂಕ್‍ನಲ್ಲಿ ಬಿದ್ದಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ದುರಂತ ಕುರಿತಾಗಿ ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷರೂಪಾಯಿ ನೀಡುವುದಾಗಿ ಹೇಳಿದ್ದಾರೆ.

Related Posts

Leave a Comment