Home Kannada ಯಲಹಂಕ: ಸಕಾಲಕ್ಕೆ‌ ಆಕ್ಸಿಜನ್ ಪೂರೈಸಿ ಸೋಂಕಿತರ ಜೀವ ಉಳಿಸಿದ ಸೋನು ಸೂದ್ ಟ್ರಸ್ಟ್

ಯಲಹಂಕ: ಸಕಾಲಕ್ಕೆ‌ ಆಕ್ಸಿಜನ್ ಪೂರೈಸಿ ಸೋಂಕಿತರ ಜೀವ ಉಳಿಸಿದ ಸೋನು ಸೂದ್ ಟ್ರಸ್ಟ್

by akash

ಬೆಂಗಳೂರು: ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ 10ಕ್ಕೂ ಹೆಚ್ಚು ಸೋಂಕಿತರಿಗೆ ಸಕಾಲಕ್ಕೆ‌ ಆಕ್ಸಿಜನ್ ಒದಗಿಸುವ ಮೂಲಕ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಮಾನವೀಯ ಕೆಲಸ ಮಾಡಿದೆ. ಯಲಹಂಕ ಬಳಿಯಿರುವ ಅರ್ಕ ಖಾಸಗಿ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಾತ್ರೋರಾತ್ರಿ ಆಕ್ಸಿಜನ್​ ಖಾಲಿಯಾಗಿದ್ದರಿಂದ ಇಬ್ಬರು ಸಾವನ್ನಪ್ಪಿದ್ದರು. ಸಾವನ್ನಪ್ಪಿದ್ದ ರೋಗಿಗಳ ಪೈಕಿ ಮಹಿಳಾ ರೋಗಿಯನ್ನು ಶನಿವಾರ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಕಳೆದ ಎರಡು ದಿನಗಳವರೆಗೆ ಆಕ್ಸಿಜನ್ ವ್ಯವಸ್ಥೆ ಚೆನ್ನಾಗಿತ್ತು. ನಿನ್ನೆ ರಾತ್ರಿ ಆಕ್ಸಿಜನ್ ಕೊರೆತೆ ಕಂಡು ಬಂದಿದ್ದರಿಂದ ತಡರಾತ್ರಿ 1.30ಕ್ಕೆ ತರುವಷ್ಟರಲ್ಲಿ ಅಕ್ಕನ ಪ್ರಾಣ ಹೋಗಿಬಿಟ್ಟಿತ್ತು ಎಂದು ಮೃತ ಮಹಿಳೆ ತಮ್ಮ ಅನಿಲ್ ತಿಳಿಸಿದ್ದಾರೆ. ತಪ್ಪಿದ ಭಾರೀ ಅನಾಹುತ: ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕೂಡಲೇ ಯಲಹಂಕ ‌ನ್ಯೂಟೌನ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಅರ್ಕ ಆಸ್ಪತ್ರೆ ಬಳಿ ಬಂದ ಇನ್ಸ್​ಪೆಕ್ಟರ್ ಸತ್ಯನಾರಾಯಣ್, ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿದ್ದಾರೆ. ಇನ್ಸ್​ಪೆಕ್ಟರ್ ಮನವಿಗೆ ಕೂಡಲೇ ಸ್ಪಂದಿಸಿರುವ ಸೋನು ಸೂದ್ ಟ್ರಸ್ಟ್ ಸಿಬ್ಬಂದಿ, 11 ಆಕ್ಸಿಜನ್ ಸಿಲಿಂಡರ್​ಗಳನ್ನು ಬೈಕ್ ಹಾಗೂ ಕಾರುಗಳಲ್ಲಿ ತಂದಿದ್ದಾರೆ. ಸಮಯಕ್ಕೆ ಸರಿಯಾಗಿ ಆಕ್ಸಿಜನ್ ತಂದಿದ್ದರಿಂದ ಕೂಡಲೇ 10ಕ್ಕೂ ಹೆಚ್ಚು ಸೋಂಕಿತರಿಗೆ ಆಕ್ಸಿಜನ್ ‌ನೀಡಲಾಗಿದೆ. ಆಕ್ಸಿಜನ್ ಸಿಲಿಂಡರ್ ತರುವುದು ಇನ್ನೊಂದು ತಾಸು ತಡವಾಗಿದ್ದರೂ ಐಸಿಯುನಲ್ಲಿದ್ದ ಕೋವಿಡ್ ಸೋಂಕಿತರು ಮೃತಪಡುವ ಸಾಧ್ಯತೆಯಿತ್ತು‌. ಸೋನು ಸೂದ್ ಚಾರಿಟೇಬಲ್ ಟ್ರಸ್ಟ್​ನ ಅಶ್ಮತ್, ರಾಧಿಕಾ, ರಾಘವ್ ಇನ್ನಿತರ ಸದಸ್ಯರು ಆಸ್ಪತ್ರೆಗೆ ಆಕ್ಸಿಜನ್‌ ಪೂರೈಸಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ‌.

Related Posts

Leave a Comment