Home Kannada ಯುವಕನ ಕುಟುಂಬದಿಂದ ನಿತ್ಯ ಕಿರುಕುಳ.. ದಲಿತ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆಗೆ ಶರಣು!

ಯುವಕನ ಕುಟುಂಬದಿಂದ ನಿತ್ಯ ಕಿರುಕುಳ.. ದಲಿತ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆಗೆ ಶರಣು!

by Eha

ಸಂಬಲ್: ಬಹ್ಜೋಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತ ಅತ್ಯಾಚಾರ ಸಂತ್ರಸ್ತೆ ನೇಣಿಗೆ ಶರಣಾಗಿದ್ದಾರೆ. ಒಂದು ವರ್ಷದ ಹಿಂದೆ ನೆರೆಹೊರೆಯ ಯುವಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಯುವಕರು ಜೈಲಿನಲ್ಲಿದ್ದಾರೆ. ಅತ್ಯಾಚಾರಕ್ಕೊಳಗಾದವರ ಕುಟುಂಬಕ್ಕೆ ರಾಜಿ ಮಾಡಿಕೊಳ್ಳಲು ಆರೋಪಿ ಯುವಕರ ಕುಟುಂಬ ಒತ್ತಡ ಹೇರುತ್ತಿತ್ತು ಎಂದು ಆರೋಪಿಸಲಾಗಿದೆ. ಒಂದು ವರ್ಷದ ಹಿಂದೆ ಕಾಲೇಜಿಗೆ ಹೋಗುತ್ತಿರುವ ದಲಿತ ಹುಡುಗಿ ಮೇಲೆ ನೆರೆಹೊರೆ ಯುವಕ ರಾಮ್‌ಲಾಲ್ ಅತ್ಯಾಚಾರ ಎಸಗಿದ್ದಾನೆ. ಬಳಿಕ ಸಂತ್ರಸ್ತೆ ಪೋಷಕರೊಂದಿಗೆ ಬಹ್ಜೋಯಿ ಪೊಲೀಸ್ ಠಾಣೆಯಲ್ಲಿ ರಾಮ್​ಲಾಲ್​ ವಿರುದ್ಧ ದೂರು ನೀಡಿದ್ದರು. ಇದರ ನಂತರ ಪೊಲೀಸರು ಆರೋಪಿ ರಾಮ್ ಲಾಲ್ ನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದರು. ಈ ಘಟನೆಯಿಂದ ಬಾಲಕಿ ಮಾನಸಿಕ ಖಿನ್ನತೆಗೊಳಗಾಗಿದ್ದಳು. ಘಟನೆಯಿಂದ ಹೊರಬರಲು ಬಾಲಕಿಗೆ ಸಾಧ್ಯವಾಗಲೇ ಇಲ್ಲ. ಇದರ ಮಧ್ಯೆ ರಾಮ್​ಲಾಲ್​ ಕುಟುಂಬಸ್ಥರು ರಾಜೀ ಹೆಸರಿನಲ್ಲಿ ಬಾಲಕಿಗೆ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದರು. ಇದರಿಂದ ಬಾಲಕಿ ಮತ್ತೆ ಕುಗ್ಗಿ ಹೋಗಿದ್ದಾಳೆ. ತನ್ನ ಕುಟುಂಬದ ಮೇಲೆ ಒತ್ತಡ ಹಾಕುತ್ತಿರುವುದನ್ನು ಸಹಿಸದ ಬಾಲಕಿ ತನ್ನ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಕುರಿತು ಬಹ್ಜೋಯಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Comment