Home Kannada ಯುವತಿಗೆ ಕಿರುಕುಳ ನೀಡಿ ಹಣ ದೋಚಿದ್ದ ಆರೋಪಿಗಳು ಅರೆಸ್ಟ್​

ಯುವತಿಗೆ ಕಿರುಕುಳ ನೀಡಿ ಹಣ ದೋಚಿದ್ದ ಆರೋಪಿಗಳು ಅರೆಸ್ಟ್​

by Eha

ಮಂಗಳೂರು: ಯುವತಿಯೊಬ್ಬಳು ಬಸ್​ನಿಂದ ಇಳಿದು ಮನೆಗೆ ಹೋಗುತ್ತಿದ್ದ ವೇಳೆ ಆಕೆಗೆ ಕಿರುಕುಳ ನೀಡಿ ಹಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಹಾರ್​ ರಾಜ್ಯದ ಅರರಿಯ ಜಿಲ್ಲೆಯ ಅಜಯಕುಮಾರ್ ಮತ್ತು ಸುಬೋಧ ಕುಮಾರ್ ಬಂಧಿತರು. ಮಾರ್ಚ್ 23 ರಂದು ಯುವತಿಯೊಬ್ಬಳು ಮಂಗಳೂರಿನಿಂದ ಕೆಲಸ ಮುಗಿಸಿಕೊಂಡು ಜೋಕಟ್ಟೆ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಮನೆಗೆ ಹೋಗುತ್ತಿದ್ದ ವೇಳೆ ಆಕೆಗೆ ಕಿರುಕುಳ ನೀಡಿ, ಆಕೆಯ ಪರ್ಸ್​ನಲ್ಲಿದ್ದ 1 ಸಾವಿರ ರೂ. ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

Related Posts

Leave a Comment