Home Kannada ರಸ್ತೆಯಲ್ಲಿ ಹೋಗ್ತಿದ್ದ ಯುವತಿಗೆ ಗುಪ್ತಾಂಗ ತೋರಿಸಿದ ಕಾಮುಕ : ಒಂದೇ ತಾಸಿನಲ್ಲಿ ಆರೋಪಿ ಅರೆಸ್ಟ್​

ರಸ್ತೆಯಲ್ಲಿ ಹೋಗ್ತಿದ್ದ ಯುವತಿಗೆ ಗುಪ್ತಾಂಗ ತೋರಿಸಿದ ಕಾಮುಕ : ಒಂದೇ ತಾಸಿನಲ್ಲಿ ಆರೋಪಿ ಅರೆಸ್ಟ್​

by Eha

ಉಳ್ಳಾಲ(ದಕ್ಷಿಣ ಕನ್ನಡ): ಯುವತಿಗೆ ಗುಪ್ತಾಂಗ ತೋರಿಸಿದ ಆರೋಪಿಯನ್ನು ದೂರು ದಾಖಲಾದ ಗಂಟೆಯೊಳಗೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಮಾರ್ಗದರ್ಶನದಲ್ಲಿ ಪಿಎಸ್​​ಐ ಶಿವಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಪಿಲಾರು ನಿವಾಸಿ ಮಹಮ್ಮದ್ ಆರೀಫ್ (27) ಬಂಧಿತ. ಕುತ್ತಾರಿನ ವಿಷ್ಣುಮೂರ್ತಿ ರಸ್ತೆಯ ಮೂಲಕ ಕುತ್ತಾರು ಜಂಕ್ಷನ್ ಕಡೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಯುವತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಮಾಸ್ಕ್ ಮತ್ತು ಟೋಪಿ ಧರಿಸಿಕೊಂಡು ಮೊಬೈಲ್​ನಲ್ಲಿ ಮಾತನಾಡುತ್ತಾ ತನ್ನ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ್ದಾನೆ ಎನ್ನಲಾಗ್ತಿದೆ. ಈತನ ವರ್ತನೆಯಿಂದ ಬೆದರಿದ ಯುವತಿ ಹತ್ತಿರದ ಟೈಲರ್ ಅಂಗಡಿಗೆ ಹೋಗಿ ಸಹಾಯ ಯಾಚಿಸಿದ್ದಾಳೆ. ಕೂಡಲೇ ಅಲ್ಲಿ ನೆರೆದಿದ್ದ ಜನರು ಎಚ್ಚೆತ್ತಾಗ ಗುಪ್ತಾಂಗ ತೋರಿಸಿದಾತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೃತ್ಯ ಎಸಗಿದ ಆರೋಪಿಯ ಫೋಟೊವನ್ನು ಕಾರು ಚಾಲಕರೊಬ್ಬರು ಸೆರೆ ಹಿಡಿದಿದ್ದಾರೆ. ಆರೋಪಿ ಈ ಹಿಂದೆಯೂ ಮಹಿಳೆಯರ ಬಳಿ ಹೋಗಿ ಇದೇ ರೀತಿ ಕೃತ್ಯವನ್ನು ಎಸಗಿದ್ದ ಎನ್ನಲಾಗ್ತಿದೆ. ನೊಂದ ಯುವತಿಯ ತಾಯಿ ಉಳ್ಳಾಲ ಠಾಣೆಗೆ ನೀಡಿದ ದೂರಿನಂತೆ ಆರೋಪಿಯನ್ನು ಒಂದೇ ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.

Related Posts

Leave a Comment