ಬೆಂಗಳೂರು: ಸಿರಿವಂತರ ಮಕ್ಕಳ ಶೋಕಿಗೆ ಸಿಲಿಕಾನ್ ಸಿಟಿಯಲ್ಲಿ ಕಡಿವಾಣವೇ ಇಲ್ಲದಂತಾಗಿದ್ದು, ಇವರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹದ್ದೇ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ನಿನ್ನೆ ತಡರಾತ್ರಿ ಕಾವೇರಿ ಜಂಕ್ಷನ್ ಅಂಡರ್ ಪಾಸ್ನಲ್ಲಿ ಆಡಿ ಎಜಿ ಎನ್ನುವ ಸ್ಪೋರ್ಟ್ಸ್ ಕಾರೊಂದು ಓವರ್ ಸ್ಪೀಡ್ನಲ್ಲಿ ಬರುತ್ತಿತ್ತು. ಈ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದನು. ಘಟನಾ ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವೆಸಗಿದ ಕಾರಿನಲ್ಲಿ ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ಓರ್ವ ಪ್ರಭಾವಿ ರಾಜಕಾರಣಿಯ ಪುತ್ರರಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾತ್ರಿಯಾದರೆ ಸಾಕು ಹೈ ಎಂಡ್ ಕಾರುಗಳನ್ನು ರಸ್ತೆಗಿಳಿಸುವ ಶೋಕಿಲಾಲರು, ರೇಸಿಂಗ್ ಚಟಕ್ಕೆ ಅಮಾಯಕರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾತ್ರಿ ವೇಳೆ ಶ್ರೀಮಂತ ಮಕ್ಕಳ ಕಾರುಗಳ ರೇಸಿಂಗ್: ಶೋಕಿಲಾಲರ ರೇಸಿಂಗ್ ಚಟಕ್ಕೆ ಅಮಾಯಕನ ಸ್ಥಿತಿ ಗಂಭೀರ
previous post