Home Kannada ರಾತ್ರೋ ರಾತ್ರಿ ಬಾಲಕ ಸೇರಿ ಯುವಕನ ಬರ್ಬರ ಹತ್ಯೆ

ರಾತ್ರೋ ರಾತ್ರಿ ಬಾಲಕ ಸೇರಿ ಯುವಕನ ಬರ್ಬರ ಹತ್ಯೆ

by Eha

ಹಾವೇರಿ: ರಾತ್ರೋ ರಾತ್ರಿ ಮಲಗಿದ್ದ ವೇಳೆ ಬಾಲಕ ಮತ್ತು ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಸಮೀಪದ ಯತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ಕುಂದಾಪುರದ ನಿಂಗಪ್ಪ ಶಿರಗುಪ್ಪಿ(28) ಮತ್ತು ಗಣೇಶ್(13) ಎಂದು ಗುರುತಿಸಲಾಗಿದೆ. ಇವರಿಬ್ಬರು ಕೂಡ ಯತ್ತಿನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕಾಂಪ್ಲೆಕ್ಸ್ ಒಂದರಲ್ಲಿ ರಾತ್ರಿ ಹೊತ್ತು ಮಲಗಿದ್ದರು. ಈ ವೇಳೆ ದಾಳಿ ಮಾಡಿರುವ ದುಷ್ಕರ್ಮಿಗಳು ಯಾವುದೋ ಹರಿತವಾದ ಆಯಧದಿಂದ ಹೊಡೆದು ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ್, ಸಿಪಿಐ ಪ್ರಹ್ಲಾದ್ ಚನ್ನಗಿರಿ, ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಯಾರು? ಯಾವ ಕಾರಣಕ್ಕೆ? ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆಯ ನಂತರ ತಿಳಿದು ಬರಬೇಕಾಗಿದೆ. ಒಟ್ಟಿನಲ್ಲಿ ಬೆಳಂ ಬೆಳಿಗ್ಗೆ ಹಾವೇರಿ ಜನ ಡಬಲ್ ಮರ್ಡರ್ ಗೆ ಬೆಚ್ಚಿಬಿದ್ದಿದ್ದಾರೆ.

Related Posts

Leave a Comment