Home Kannada ರುಂಡ – ಮುಂಡ ಬೇರ್ಪಡಿಸಿ ವ್ಯಕ್ತಿಯ ಹತ್ಯೆ ಪ್ರಕರಣ: ‘ಛೋಟಾ ಬಾಂಬೆ’ ನಟಿ ಅರೆಸ್ಟ್​..!

ರುಂಡ – ಮುಂಡ ಬೇರ್ಪಡಿಸಿ ವ್ಯಕ್ತಿಯ ಹತ್ಯೆ ಪ್ರಕರಣ: ‘ಛೋಟಾ ಬಾಂಬೆ’ ನಟಿ ಅರೆಸ್ಟ್​..!

by akash

ಹುಬ್ಬಳ್ಳಿ: ರುಂಡ-ಮುಂಡ ಬೇರ್ಪಡಿಸಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರಿ ‘ಛೋಟಾ ಬಾಂಬೆ’ ಚಿತ್ರದ ನಟಿ ಶನಾಯ ಖಾನ್ ಉರ್ಫ್​​ ಸೋನಿ ಕಾಟವೆ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಏ.10ರಂದು ಈ ಪ್ರಕರಣ ದಾಖಲಾಗಿದ್ದು, ವಾರದಲ್ಲಿಯೇ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಕೇಶ್ ಕಟಾರೆ (33) ಎಂಬ ವ್ಯಕ್ತಿಯನ್ನು ಕೊಲೆಗೈದು, ಶವವನ್ನು ಸುಟ್ಟು ಹಾಕಿ, ಅಂಗಾಂಗ ಬೇರ್ಪಡಿಸಿ ಬೇರೆ ಬೇರೆ ಜಾಗಗಳಲ್ಲಿ ಎಸೆದು ತಲೆಮರೆಸಿಕೊಂಡಿದ್ದರು. ಈಗಾಗಲೇ ಹುಬ್ಬಳ್ಳಿ ಮೂಲದ ನಿಯಾಜಹ್ಮದ ಕಟಿಗಾರ(21), ತೌಸೀಪ್ ಚನ್ನಾಪೂರ(21), ಅಲ್ತಾಫ್ ಮುಲ್ಲಾ(24), ಅಮನ ಗಿರಣಿವಾಲೆ(19) ಬಂಧಿಸಲಾಗಿದೆ. ನಿಯಾಜಹ್ಮದ ಕಟಿಗಾರ ರಾಕೇಶ್‌ನ ತಂಗಿಯನ್ನು ಪ್ರೀತಿಸಿದ್ದು, ಅದಕ್ಕೆ ರಾಕೇಶ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Related Posts

Leave a Comment