Home Kannada ಲಾರಿ ಇಂಜಿನ್​ಗೆ ಆಕಸ್ಮಿಕ ಬೆಂಕಿ: 100ಕ್ಕೂ ಹೆಚ್ಚು ರಸಗೊಬ್ಬರ ಚೀಲಗಳು ಬೆಂಕಿಗಾಹುತಿ

ಲಾರಿ ಇಂಜಿನ್​ಗೆ ಆಕಸ್ಮಿಕ ಬೆಂಕಿ: 100ಕ್ಕೂ ಹೆಚ್ಚು ರಸಗೊಬ್ಬರ ಚೀಲಗಳು ಬೆಂಕಿಗಾಹುತಿ

by Eha

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಾಗಳ-ಶಿವಪುರ ರಸ್ತೆ ಮಾರ್ಗದಲ್ಲಿ ರಸಗೊಬ್ಬರ ಸಾಗಿಸುತ್ತಿದ್ದ ಲಾರಿ ಇಂಜಿನ್​ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ, 100ಕ್ಕೂ ಹೆಚ್ಚು ರಸಗೊಬ್ಬರ ಚೀಲ ಸುಟ್ಟು ಭಸ್ಮವಾಗಿವೆ. ಕೊಪ್ಪಳದಿಂದ ರಸಗೊಬ್ಬರ ತುಂಬಿಕೊಂಡು, ಮಾಗಳ ಗ್ರಾಮಕ್ಕೆ ಲಾರಿ ಹೊರಟಿತ್ತು. ಈ ವೇಳೆಯಲ್ಲಿ ಲಾರಿಯ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ರಸಗೊಬ್ಬರದ ಚೀಲಗಳು ಸುಟ್ಟು ಹೋಗಿವೆ. ಬೆಂಕಿ ಕಾಣಸಿಕೊಂಡಾಗ ಲಾರಿ ಚಾಲಕ, ಮತ್ತು ಕ್ಲೀನರ್ ಲಾರಿಯಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿ 400ಕ್ಕೂ ಅಧಿಕ ರಸಗೊಬ್ಬರ ಚೀಲ ಸಾಗಿಸಲಾಗುತ್ತಿತ್ತು, 100ಕ್ಕೂ ಹೆಚ್ಚು ಚೀಲಗಳು ಸುಟ್ಟುಹೋಗಿವೆ. ವಿಷಯ ತಿಳಿಯುತ್ತಿದ್ದಂತೆ ಆಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Posts

Leave a Comment