Home Kannada ಲಾರಿ-ಲೇಲ್ಯಾಂಡ್ ದೋಸ್ತ್​ ವಾಹನಗಳ ಮಧ್ಯೆ ಡಿಕ್ಕಿ: ಚಾಲಕ ಸಾವು

ಲಾರಿ-ಲೇಲ್ಯಾಂಡ್ ದೋಸ್ತ್​ ವಾಹನಗಳ ಮಧ್ಯೆ ಡಿಕ್ಕಿ: ಚಾಲಕ ಸಾವು

by Eha

ಮಂಗಳೂರು: ಲಾರಿ ಹಾಗೂ ಲೇಲ್ಯಾಂಡ್ ದೋಸ್ತ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕನೊಬ್ಬ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೊಣಾಲು (ಕೋಲ್ಪೆ) ಎಂಬಲ್ಲಿ ನಡೆದಿದೆ. ಮೃತರನ್ನು ಲೇಲ್ಯಾಂಡ್ ದೋಸ್ತ್ ವಾಹನ ಚಾಲಕ ಹಾಸನ ಜಿಲ್ಲೆಯ ಆಲೂರು ನಿವಾಸಿ ಚೇತನ್ ಎಂ.ವಿ.(22) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಹಾಗೂ ಹಾಸನದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ದೋಸ್ತ್ ನಡುವೆ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಚೇತನ್​ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment