Home Kannada ವರದಕ್ಷಿಣೆ ಕಿರುಕುಳ ಸಂಬಂಧ ದೂರು ನೀಡಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ವರದಕ್ಷಿಣೆ ಕಿರುಕುಳ ಸಂಬಂಧ ದೂರು ನೀಡಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

by akash

ಬೆಂಗಳೂರು: ಗಂಡನ ವಿರುದ್ದ ವರದಕ್ಷಿಣೆ ಕಿರುಕುಳದ ಆರೋಪದ ವಿಡಿಯೋ ಮಾಡಿ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬನಶಂಕರಿ ಠಾಣಾ ವ್ಯಾಪ್ತಿಯ ಕದಿರೇನಹಳ್ಳಿಯಲ್ಲಿ ನಡೆದಿದೆ. ದೀಪಿಕಾ (26) ಮೃತ ಮಹಿಳೆ. ಪತಿ ಜಯಕುಮಾರ್ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆ. ತನ್ನ 4 ವರ್ಷದ ಗಂಡು ಮಗುವಿನೊಂದಿಗೆ ಕಳೆದ 4 ದಿನಗಳ ಹಿಂದೆ ತವರೂರಾದ ಅಜ್ಜಂಪುರಕ್ಕೆ ತೆರಳಿದ್ದಳು. ತವರಿಗೆ ತೆರಳಿದ್ದ ಸಂದರ್ಭ ಅನಾರೋಗ್ಯದಿಂದ ಮಗು ಮೃತಪಟ್ಟಿತ್ತು. ಬಳಿಕ ದೀಪಿಕಾ ಪತಿಯ ವಿರುದ್ಧ ಅಜ್ಜಂಪುರ ಠಾಣೆಗೆ ದೂರು ನೀಡಿದ್ದಳು. ದೂರಿನ ಬಳಿಕ ತವರು ಮನೆಯಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಪೋಷಕರು ತರೀಕೆರೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಇಂದು ಬೆಂಗಳೂರಿನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಪಿಕಾ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Related Posts

Leave a Comment