Home Kannada ವಿಶಾಖಪಟ್ಟಣಂ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

ವಿಶಾಖಪಟ್ಟಣಂ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

by Eha

ಆಂಧ್ರಪ್ರದೇಶ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಬಂಗಾರು ನಾಯ್ಡು (50), ನಿರ್ಮಲಾ (46), ದೀಪಕ್ (22) ಮತ್ತು ಕಶ್ಯಪ್ (19) ಅನುಮಾನಾಸ್ಪದವಾಗಿ ಮೃತಪಟ್ಟವರು. ಇವರು ಕಳೆದ 8 ತಿಂಗಳಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಧುರವಾಡದ ಮಿಥಿಲಪುರಿಕಲಾನಿಯ ಆದಿತ್ಯ ಟವರ್ಸ್ ಬಳಿಯ ಅಪಾರ್ಟ್‌ಮೆಂಟ್​ವೊಂದರ ಐದನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Related Posts

Leave a Comment