Home Kannada ವೀಕೆಂಡ್ ಲಾಕ್ಡೌನ್… ಕುಡುಕನ ಕಾಟಕ್ಕೆ ಬೇಸತ್ತು ಎತ್ತೊಯ್ದ ಪೊಲೀಸ್ ಸಿಬ್ಬಂದಿ

ವೀಕೆಂಡ್ ಲಾಕ್ಡೌನ್… ಕುಡುಕನ ಕಾಟಕ್ಕೆ ಬೇಸತ್ತು ಎತ್ತೊಯ್ದ ಪೊಲೀಸ್ ಸಿಬ್ಬಂದಿ

by akash

ಹುಬ್ಬಳ್ಳಿ: ಕೊರೊನಾ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ವೀಕೆಂಡ್ ಲಾಕ್​ಡೌನ್ ಜಾರಿ ಮಾಡಿದೆ, ಆದರೆ ಇಲ್ಲೊಬ್ಬ ಕುಡುಕ ಲಾಕ್​​ಡೌನ್ ಇದ್ರೂ ಕೂಡ ಯಾವುದೇ ಭಯವಿಲ್ಲದೆ ಬೇಕಾಬಿಟ್ಟಿ ಓಡಾಡುವುದರ ಜೊತೆಗೆ ಪೋಲಿಸರಿಗೆ ಹಾಗೂ ಇನ್ನಿತರರಿಗೆ ಕಿರಿಕಿರಿ ಮಾಡಿರುವ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ‌. ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ವಿಕೇಂಡ್ ಲಾಕ್​ಡೌನ್ ಜಾರಿ ಮಾಡಿದೆ. ಎಲ್ಲರೂ ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿದ್ದರೂ ಸಹ ಕುಡುಕನೊಬ್ಬ ಚೆನ್ನಮ್ಮ ವೃತ್ತದಲ್ಲಿ ಎಲ್ಲರಿಗೂ ಕಿರಿಕರಿ ಮಾಡಿದ್ದಾನೆ. ಇವನ ಕಾಟಕ್ಕೆ ಬೇಸತ್ತು ಹೋದ ಟ್ರಾಫಿಕ್ ಪೋಲಿಸರು, ಆತನನ್ನು ಕರೆದೊಯ್ದು ಎಚ್ಚರಿಕೆ ನೀಡಿ ಮನೆಗೆ ಹೋಗುವಂತೆ ಹೇಳಿದ್ದಾರೆ.

Related Posts

Leave a Comment