Home Kannada ಶನಾಯಾ ಸಹೋದರನ ಕೊಲೆ ಕೇಸ್: DNA ವರದಿಗಾಗಿ ಕಾಯುತ್ತಿರುವ ಹುಬ್ಬಳ್ಳಿ ಪೊಲೀಸ್

ಶನಾಯಾ ಸಹೋದರನ ಕೊಲೆ ಕೇಸ್: DNA ವರದಿಗಾಗಿ ಕಾಯುತ್ತಿರುವ ಹುಬ್ಬಳ್ಳಿ ಪೊಲೀಸ್

by akash

ಹುಬ್ಬಳ್ಳಿ: ಚಿತ್ರನಟಿ ಶನಾಯಾ ತನ್ನ ಗೆಳೆಯರೊಂದಿಗೆ ಸೇರಿಕೊಂಡು ತನ್ನ ಸಹೋದರನ ರುಂಡ-ಮುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿಸಿದ್ದಾರೆ ಎಂಬ ಪ್ರಕರಣದಲ್ಲಿ ಈಗಾಗಲೇ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇಶ್ವಾಪುರ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಸುಟ್ಟಸ್ಥಿತಿಯಲ್ಲಿ ಪತ್ತೆಯಾದ ರುಂಡ-ಮುಂಡಗಳು ಕೊಲೆಯಾದ ರಾಕೇಶನದ್ದು ಹೌದೋ, ಅಲ್ಲವೋ ಎಂಬುವುದನ್ನು ತಿಳಿಯಲು ಡಿಎನ್ಎ ವರದಿಗಾಗಿ ಪೊಲೀಸರು ಇದೀಗ ಕಾಯುತ್ತಿದ್ದಾರೆ. ಶನಾಯಾ ಮತ್ತು ನಿಯಾಜ್ ಪರಸ್ಪರ ಪ್ರೀತಿಸುತ್ತಿದ್ದು ಇದಕ್ಕೆ ಶನಾಯಾ ಸಹೋದರ ರಾಕೇಶ ವಿರೋಧ ವ್ಯಕ್ತಪಡಿಸಿದ್ದನಂತೆ. ಇದರಿಂದ ಕುಪಿತಗೊಂಡ ಆರೋಪಿಗಳು ಏಪ್ರಿಲ್ 9ರಂದು ರಾಕೇಶನನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗಿ ತಾರಿಹಾಳ ಸೇತುವೆ ಬಳಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಶಿಕ್ಷಾ ನಗರದ ಬಾತ್ ರೂಮ್‌ನಲ್ಲಿಟ್ಟಿದ್ದರು. ಇದಾದ ಬಳಿಕ ಅಲ್ತಾಫ್ ಮತ್ತು ನಿಯಾಜ್ ಶವದ ರುಂಡ-ಮುಂಡ ಬೇರ್ಪಡಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಶವವನ್ನು ಸುಟ್ಟು ಹಾಕಿದ್ದರು.

Related Posts

Leave a Comment