Home Kannada ಶಾಲೆಯಲ್ಲಿ ವಿದ್ಯುತ್​ ಅವಘಡ : ಓರ್ವ ವಿದ್ಯಾರ್ಥಿ ಸಾವು, 9 ಮಂದಿಗೆ ಗಾಯ

ಶಾಲೆಯಲ್ಲಿ ವಿದ್ಯುತ್​ ಅವಘಡ : ಓರ್ವ ವಿದ್ಯಾರ್ಥಿ ಸಾವು, 9 ಮಂದಿಗೆ ಗಾಯ

by Eha

ದರ್ಭಾಂಗ(ಬಿಹಾರ) : ಶಾಲೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು. ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ನಡೆದಿದೆ. ಕೊಠಡಿಯೊಳಗಿದ್ದ ಕಬ್ಬಿಣದ ಸರಳನ್ನು ಮುಟ್ಟಿದಾಗ ವಿದ್ಯುತ್​ ಸ್ಪರ್ಶಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಾಲೆ ಠಾಣಾ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ. ಆಕ್ರೋಶಗೊಂಡಿರುವ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Related Posts

Leave a Comment