Home Kannada ಶೇ.30 ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ತೀರ್ಮಾನ: ಆದೇಶ ಇಂದು?

ಶೇ.30 ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ತೀರ್ಮಾನ: ಆದೇಶ ಇಂದು?

by Eha

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇಕಡ.30 ಪಠ್ಯ ಕಡಿತಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಪಠ್ಯ ಕಡಿತದ ಆದೇಶ ಹೊರಬೀಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

1ನೇ ತರಗತಿಯಿಂದ 9ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದ ತಜ್ಞರ ಸಮಿತಿಯೊಂದಿಗೆ ಜ.15 ರ ಬಳಿಕ ಸಮಾಲೋಚನೆ ನಡೆಸಲಾಗುತ್ತದೆ. ಖಾಸಗಿ ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶುಲ್ಕದಲ್ಲಿ ಶೇಕಡ.70 ಮಾತ್ರ ತೆಗೆದುಕೊಳ್ಳಲು ಒಪ್ಪಿ ಎರಡು ಒಕ್ಕೂಟಗಳು ಮುಂದೆ ಬಂದಿವೆ. ಕೊರೊನಾ ಹಿನ್ನೆಲೆಯಿಂದ ಪಾಲಕರು ಮತ್ತು ಶಿಕ್ಷಕರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಕಡೆಯ ಪ್ರಮುಖರ ಸಭೆ ಕರೆದು ಒಂದು ಸೂತ್ರ ರಚಿಸಲು ಪ್ರಯತ್ನ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

‘ಇಲ್ಲಿಯವರೆಗೂ ನಾನು ರಾಜ್ಯದಲ್ಲಿ 150 ರಿಂದ 170 ಶಾಲೆಗೆ ಭೇಟಿ ನೀಡಿದ್ದೇನೆ. ವಿದ್ಯಾಗಮ ನಿಲ್ಲಿಸಬಾರದೆಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ತೆರೆದ ಪುಸ್ತಕ ಪರೀಕ್ಷೆ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆಯಾಗಬೇಕಿದೆ’ ಎಂದು ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್ ಹೇಳಿದ್ದಾರೆ.

ರದ್ದುಗೊಳಿಸಿದ್ದ ಗಳಿಕೆ ರಜೆ ನಗದೀಕರಣಕ್ಕೆ ಸರ್ಕಾರ ಸಮ್ಮತಿ

ಇನ್ನೂ ಪಠ್ಯ ಕಡಿತ ಕುರಿತ ವಿಷಯವಾಗಿ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು. ಪಠ್ಯ ಕಡಿಮೆ ಮಾಡಿದಲ್ಲಿ ಗ್ರಾಮೀಣ ಮಕ್ಕಳಿಗೆ ಸಮಸ್ಯೆಯಾಗಲಿದೆ ಎಂದು ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಗಳಲ್ಲಿ ಸಾಕಷ್ಟು ಅಂತರವಿದ್ದು, ರಾಜ್ಯ ಪಠ್ಯಕ್ರಮದ ಮಕ್ಕಳು ವಯಸ್ಸಿಗೆ- ತರಗತಿಗಳಿಗೆ ಅನುಸಾರವಾಗಿ ಕಲಿಕಾ ಸಾಮರ್ಥ್ಯಗಳನ್ನು ಪಡೆದುಕೊಳ್ಳದಿದ್ದರೆ ಅವರ ಒಟ್ಟು ಶಿಕ್ಷಣದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಹೆಚ್ಚು ಗ್ರಾಮೀಣ ಹಾಗೂ ಅವಕಾಶ ವಂಚಿತ ಕೆಳಸ್ತರದ ಮಕ್ಕಳ ಕಲಿಕೆಗೆ ದೊಡ್ಡ ಹಿನ್ನೆಡೆ ಉಂಟು ಮಾಡುತ್ತದೆ. ಜನವರಿ 15 ರಿಂದ ಜೂನ್‌ ವರೆಗೆ ಶಾಲೆಗಳೂ ನಡೆದರೆ ಎಲ್ಲಾ ಪಠ್ಯಗಳನ್ನು ಮುಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪಠ್ಯ ಕಡಿತ ಪ್ರಸ್ತಾಪದಿಂದ ಹಿಂದೆಸರಿಯಬೇಕು ಎಂದು ನಿರಂಜನಾರಾಧ್ಯ ತಿಳಿಸಿದ್ದಾರೆ

Related Posts

Leave a Comment