Home Kannada ಶ್ರೀ ಕೃಷ್ಣ ವಿಠಲ ಪ್ರತಿಷ್ಠಾಪನದ ೨೩ ನೇ ವಾರ್ಷಿಕೋತ್ಸವ, ಸಾಮೂಹಿಕ ಮಹಾಗಣಪತಿಯಾಗದೇವರಿಗೆ ಕೃತಜ್ನತಾರ್ಪಣೆ, ತ್ಯಾಗದ ಸಂಕೇತವೇ ಯಾಗದ ನೈಜತೆ – ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್

ಶ್ರೀ ಕೃಷ್ಣ ವಿಠಲ ಪ್ರತಿಷ್ಠಾಪನದ ೨೩ ನೇ ವಾರ್ಷಿಕೋತ್ಸವ, ಸಾಮೂಹಿಕ ಮಹಾಗಣಪತಿಯಾಗದೇವರಿಗೆ ಕೃತಜ್ನತಾರ್ಪಣೆ, ತ್ಯಾಗದ ಸಂಕೇತವೇ ಯಾಗದ ನೈಜತೆ – ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್

by Eha

ಮುಂಬಯಿ : ಲೋಕದಲ್ಲಿ ಒಬ್ಬರಿಂದ ಸಣ್ಣ ಉಪಕಾರ ಪಡೆದರೂ ನಾವು ಪ್ರತ್ಯುಪಕಾರ ಮಾಡುತ್ತೇವೆ ಅಲ್ಲದಿದ್ದಲ್ಲಿ ಧನ್ಯವಾದ ಎಂದಾದರೂ ಹೇಳುತ್ತೇವೆ. ದೇವರು ನಮ್ಮನ್ನು ಈ ಭೂಮಿಗೆ ತಂದು ಎಲ್ಲಾ ರೀತಿಯ ಮತೆಯಲಾಗದ ಉಪಕಾರವನ್ನು ಮಾಡಿದ್ದಾರೆ. ಅಂತಹ ದೇವರಿಗೆ ಕೃತಜ್ನತಾರ್ಪಣೆ ಪೂಜೆ ಮಾಡಿ ಅವರ ಉಪಕಾರವನ್ನು ಸ್ಮರಿಸುತ್ತಾ ಲೋಕಕಲ್ಯಾಣದ ದೃಷ್ಟಿಯಿಂದ ತ್ಯಾಗ ಮಾಡುವುದೇ ಯಾಗದ ಉದ್ದೇಶ ಎಂದು ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರು ನುಡಿದರು.ನಗರದ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾಪನದ 23ನೇ ಧಾರ್ಮಿಕ, ಸಾಂಸ್ಕೃತಿಕ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿದ ಸಾರ್ವಜನಿಕ ಸಾಮೂಹಿಕ ಮಹಾಗಣಪತಿಯಾಗದ ಸಂದರ್ಭದಲ್ಲಿ ನೆರೆದ ನೂರಾರು ಭಕ್ತಾಭಿಮಾನಿಗಳ ಪ್ರಾರ್ಥನೆಯ ಸಮಯದಲ್ಲಿ ಅವರು ಮಾತನಾಡುತ್ತಾ ಈಗ ನಮ್ಮೆಲ್ಲರನ್ನು ಚಿಂತೆಗೀಡುಮಾಡಿರುವ ಕೋರೋನಾ ರೋಗದಂತೆ ವಿಶ್ವಾಂದ್ಯಂತ ವ್ಯಾಪ್ತನಾದ ನಾನಾ ಗೂಪ ಧರಿಸಿ ಪೀಡಿಸಿದ ವೃತ್ರಾಸುರನನ್ನು ದೇವತೆಗಳು ಭಕ್ತಿ, ಪ್ರಾರ್ಥನೆ, ಯಾಗಾದಿಗಳಿಂದ ಭಗವಂತನ ಅನುಗ್ರಹದಿಂದ ಮನೋಬಲದಿಂದ ಗೆದ್ದರು ಎಂದು ವಿವರವನ್ನು ನೀಡುತ್ತಾ ಮಹಾಗಣಪತಿಯಾಗದಲ್ಲಿ ಪಾಲ್ಗೊಂಡ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತ ಪರಿವಾರಕ್ಕೂ ದೇವರ ಅನುಗ್ರಹವಿರಲಿ ಎಲ್ಲಾ ರೋಗ ಚಿಂತೆಗಳನ್ನು ಪರಿಹರಿಸಿ ದೇಶದಲ್ಲಿ ಸುಭಿಕ್ಷೆ ಯನ್ನು ತರಲಿ ಎಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಶೀರ್ವದಿಸಿದರು.ಅಂದೇರಿ ಪೂರ್ವ ಕೊಂಡಿವೆಟ್ಟಾದ ರಾಮಕೃಷ್ಣ ಮಂದಿರದ ಆವರಣದಲ್ಲಿ ಈ ಯಾಗದಲ್ಲಿ ಸಂಸ್ಥೆಯ ವಿಶ್ವಸ್ಥರಾದ ಅನಿನಾಶ್ ಶಾಸ್ತ್ರಿ ದಂಪತಿ, ವಿದ್ಯಾನ್ ವಿಶ್ವನಾಥ ಭಟ್ ದಂಪತಿ. ಪ್ರತಿಷ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ರವಿ ಕರ್ಕೇರ, ಶಂಕರ ಪೂಜಾರಿ, ಮಾಧವ ಕೋಟ್ಯಾನ್, ವಾದಿರಾಜ ಕುಬೆರ್, ಪ್ರಧಾನ ಕಾರ್ಯದರ್ಶಿ ಪೂವಪ್ಪ ಪೂಜಾರಿ, ಸತೀಷ್ ಪೂಜಾರಿ, ಸುಧೀರ್ ಅಮೀನ, ಶೇಖರ ಸಸಿಹಿತ್ತ್ಲು, ಜನಾರ್ಧನ ಸಾಲಿಯಾನ್, ದೇವ್ ಬಾಗ್ವೆ, ಸಂಜಯ್ ಜಾದವ್, ವಿಶ್ವನಾಥ ಸಿ ಶೆಟ್ಟಿ, ಸುಧಾಕರ ಶೆಟ್ಟಿ, ನಂದಳಿಕೆ ಭರತ್ ಶೆಟ್ಟಿ, ಸುಧೀರ್ ಶೆಟ್ಟಿ, ಹ್ಯಾರಿ ಸಿಕ್ವೇರ ಮಹಿಳಾ ಮಾರ್ಯದರ್ಶಿ ಸುಶೀಲಾ ದೇವಾಡಿಗ ಮುಂತಾದವರು ಸಹಕರಿಸಿದರು.ಕಾರ್ಯಕ್ರಮವು ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಭಜನಾಮಂಡಳಿ, ಮದ್ವೇಶ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮ ದೀಪ ಬೆಳಗಿಸುದರೊಂದಿಗೆ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಪ್ರಾರ್ಥನೆ, ಸ್ವಸ್ತಿವಾಚನ, ವೇದಮಂತ್ರ, ಭಜನೆ ಮಂಗಳವಾದ್ಯ, ಮಂಗಳಾರತಿ, ಪೂರ್ಣಾವತಿಯೊಂದಿಗೆ ಯಾಗವು ಸಂಪನ್ನಗೊಂಡಿತು. ಕೊನೆಯಲ್ಲಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

Related Posts

Leave a Comment