Home Kannada ಸವಣೂರು ರೈಲ್ವೆ ಗೇಟ್ ಬಳಿ ಯುವಕನ ಶವ ಪತ್ತೆ

ಸವಣೂರು ರೈಲ್ವೆ ಗೇಟ್ ಬಳಿ ಯುವಕನ ಶವ ಪತ್ತೆ

by Eha

ಕಡಬ: ಕಾಣಿಯೂರು ರೈಲು ಮಾರ್ಗದ ಮಧ್ಯೆಯಿರುವ ಸವಣೂರು ರೈಲ್ವೆ ಗೇಟ್ ಬಳಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಯುವಕ ಯಾರು?, ಎಲ್ಲಿಯವನು? ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ

Related Posts

Leave a Comment