Home Kannada ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿ ಸಡಗರ: ಮಾರುಕಟ್ಟೆಗಳಲ್ಲಿ ಎಳ್ಳು-ಬೆಲ್ಲ, ಕಬ್ಬಿನ ಖರೀದಿ ಭರಾಟೆ

ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿ ಸಡಗರ: ಮಾರುಕಟ್ಟೆಗಳಲ್ಲಿ ಎಳ್ಳು-ಬೆಲ್ಲ, ಕಬ್ಬಿನ ಖರೀದಿ ಭರಾಟೆ

by Eha

ಗುರುವಾರ ಮಕರ ಸಂಕ್ರಾಂತಿ ಸಂಭ್ರಮ.. ಇದರ ಅಂಗವಾಗಿ ಮೈಸೂರು ನಗರದೆಲ್ಲೆಡೆ ವ್ಯಾಪಾರ ಜೋರಾಗಿತ್ತು. ಹಬ್ಬದ ಪ್ರಮುಖ ಕೇಂದ್ರ ಬಿಂದುವಾದ ಕಬ್ಬು, ಎಳ್ಳು–ಬೆಲ್ಲ, ಸಕ್ಕರೆ ಅಚ್ಚುಗಳನ್ನು ಜನತೆ ಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಕ್ರಾಂತಿ ಎಳ್ಳಿನ ಜತೆಗೆ ನೀಡುವ ಕಬ್ಬಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಪ್ರತಿ ಕಬ್ಬಿನ ಜಲ್ಲೆ 20 ರಿಂದ 30ರೂರಂತೆ ಮಾರಾಟವಾಗುತ್ತಿವೆ. ನಗರದ ಪ್ರಮುಖ ರಸ್ತೆ, ವೃತ್ತಗಳು ಸೇರಿದಂತೆ ಹಲವೆಡೆ ಮಾರುಕಟ್ಟೆಗಳಲ್ಲಿ ಕಬ್ಬಿನ ವ್ಯಾಪಾರ ಜೋರಾಗಿತ್ತು.

ಮೈಸೂರಿನ ಪ್ರಮುಖ ರಸ್ತೆಗಳಾದ ದೇವರಾಜ ಮಾರುಕಟ್ಟೆ, ಎಂ. ಜಿ. ರಸ್ತೆಯ ತರಕಾರಿ ಮಾರುಕಟ್ಟೆ, ನಂಜು ಮಳಿಗೆ ವೃತ್ತ, ಜೆ.ಎಲ್.ಬಿ ರಸ್ತೆ, ಒಂಟಿ ಕೊಪ್ಪಲು ಮುಖ್ಯರಸ್ತೆ, ಚಿಕ್ಕ ಗಡಿಯಾರ, ದೊಡ್ಡ ಗಡಿಯಾರ, ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆ, ಕುಂಬಾರ ಕೊಪ್ಪಲು ವೃತ್ತ, ಹೂಟಗಳ್ಳಿ ವೃತ್ತ, ಕುವೆಂಪು ನಗರ ಕಾಂಪ್ಲೆಕ್ಸ್‌ಗಳಲ್ಲಿ ಕಬ್ಬು ಮಾರಾಟ ಕಳೆದೆರಡು ದಿನದಿಂದ ಭರದಿಂದ ಸಾಗುತ್ತಿದೆ.

ಮಕರ ಸಂಕ್ರಾಂತಿ 2021: ಎಳ್ಳು – ಬೆಲ್ಲ ತಿಂದು ಸಿಹಿ ಹಂಚೋಣ..! ಇಲ್ಲಿದೆ ಶುಭಾಶಯಗಳು
ಎಳ್ಳು–ಬೆಲ್ಲ ಮಿಶ್ರಣದ 100 ಗ್ರಾಂ ಪೊಟ್ಟಣಕ್ಕೆ 40 ರೂ. ನಿಂದ 150ವರೆಗೂ ಎಲ್ಲೆಡೆ ನಿಗದಿ ಪಡಿಸಲಾಗಿದೆ. ಇನ್ನು ಸಂಕ್ರಮಣದ ಹಿನ್ನೆಲೆಯಲ್ಲಿ ಹೂವಿನ ವ್ಯಾಪಾರವೂ ಜೋರಾಗಿಯೇ ಇತ್ತು. ಆದರೆ ಇತರೆ ಹಬ್ಬಗಳಿಗೆ ಹೋಲಿಸಿದರೆ ಅಷ್ಟಾಗಿ ಹೂವಿನ ರೇಟ್‌ ಏರಿಕೆಯಾಗಿರಲಿಲ್ಲ. ಮಾರಿಗೆ 40-50ರೂ ತನಕ ಸೇವಂತಿಗೆ ವ್ಯಾಪಾರವಾಗುತ್ತಿದೆ. ಉಳಿದಂತೆ ಮಾರುಕಟ್ಟೆಯಲ್ಲಿ ಮಲ್ಲಿಗೆ, ಕಾಕಡ, ಕನಕಾಂಬರ, ಸುಗಂಧ ರಾಜ, ಗುಲಾಬಿ ಹೂಗಳ ಬೆಲೆ ಸಾಮಾನ್ಯ ದಿನದ ದರಗಳಂತೆ ಗೋಚರವಾಗುತ್ತಿದೆ.

Related Posts

Leave a Comment

Translate »