Home Kannada ಸಾಗರ: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

ಸಾಗರ: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

by akash

ಶಿವಮೊಗ್ಗ: ಸಾಗರ ಆಸ್ಪತ್ರೆ ಆವರಣದಲ್ಲಿರುವಬಾವಿಗೆಆಕಸ್ಮಿಕವಾಗಿ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿ‌ಶಾಮಕ ದಳದವರು ರಕ್ಷಣೆ ಮಾಡಿದರು. ಶಿರಾಳಕೊಪ್ಪದ ಆನಂದ(35) ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಈತ ಸಾಗರ ಆಸ್ಪತ್ರೆ ಆವರಣದಲ್ಲಿರುವಬಾವಿಗೆ ಬಿದ್ದಿದ್ದಾನೆ. ಇಲ್ಲಿನ ಸಿಬ್ಬಂದಿ ರವಿ ಎಂಬಾತ ಬಾವಿ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಆನಂದ ರಕ್ಷಣೆಗಾಗಿ ಕಿರುಚಿದ್ದಾನೆ. ಈ ವೇಳೆ ಬಾವಿಗೆ ಇಣುಕಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ರವಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಬಾವಿಯಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

Related Posts

Leave a Comment