Home Kannada ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ: ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ: ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

by Eha

ಶಿವಮೊಗ್ಗ: ಸಾಮಾಜಿಕ ಹೋರಾಟಗಾರರನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಮತ್ತಿಮನೆ ಗ್ರಾಮದ ಬಳಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನಸಂಗ್ರಾಮ್ ಪರಿಷತ್​ನ ಸದಸ್ಯ ಗಿರೀಶ್ ಆಚಾರ್ ಎಂಬುವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಿರೀಶ್ ಆಚಾರ್ ಹೊಸನಗರದ ನಿವಾಸಿಯಾಗಿದ್ದು, ಬೈಕ್​ನಲ್ಲಿ ಕುಂದಾಪುರಕ್ಕೆ ಹೋಗುತ್ತಿರುವಾಗ ಮತ್ತಿಮನೆ ಗ್ರಾಮದ ಬಳಿ ಬೈಕ್ ಅಡ್ಡಗಟ್ಟಿ ಪಕ್ಕದಲ್ಲಿಯೇ ಇದ್ದ ಮನೆಗೆ ಎಳೆದುಕೊಂಡು ಹೋಗಿ ಮನಸೋಇಚ್ಚೆ ಥಳಿಸಿದ್ದಾರೆ ಎನ್ನಲಾಗಿದೆ. ನಂತರ ಮನೆಯಲ್ಲಿದ್ದ ಮಹಿಳೆಯನ್ನು ಮತ್ತು ಗಿರೀಶ್​​ ಅವರನ್ನು ಕೂಡಿಹಾಕಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಗಿರೀಶ್​​​ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ಪರಿಸರ ಸಂರಕ್ಷಣಾ ಹೋರಾಟದಲ್ಲಿ ಭಾಗಿಯಾಗಿದ್ದ ಆಚಾರ್​​​​​​, ಹೊಸನಗರದಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಡಿದ್ದಕ್ಕಾಗಿ ಈ ಪ್ರತಿಫಲ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

Related Posts

Leave a Comment