Home Kannada ಸಿಸಿಬಿ ಬಲೆಗೆ ಬಿದ್ದ ನೈಜೀರಿಯನ್ ಡ್ರಗ್​​ ಪೆಡ್ಲರ್ಸ್‌‌

ಸಿಸಿಬಿ ಬಲೆಗೆ ಬಿದ್ದ ನೈಜೀರಿಯನ್ ಡ್ರಗ್​​ ಪೆಡ್ಲರ್ಸ್‌‌

by Eha

ಬೆಂಗಳೂರು: ನಗರದಲ್ಲಿ ಡ್ರಗ್ ಪೆಡ್ಲರ್‌ಗಳ ಹಾವಳಿ‌ ಹೆಚ್ಚಾಗುತ್ತಿದೆ.‌ ಇದೀಗ ಸಿಸಿಬಿ ಪೊಲೀಸರು ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಜಾನ್ ಮತ್ತು ಅಂಥೋನಿ ಬಂಧಿತ ನೈಜೀರಿಯನ್‌ ಮೂಲದ ಆರೋಪಿಗಳಾಗಿದ್ದು, ಹತ್ತು ಲಕ್ಷ ಮೌಲ್ಯದ ಕೊಕೇನ್, ಎಮ್ ಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಾಟ್ಸ್ ಅಪ್ ಗ್ರೂಪ್ ಕ್ರಿಯೇಟ್ ಮಾಡಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿಷ್ಠಿತ ಕಾಲೇಜಿ‌ನ ವಿದ್ಯಾರ್ಥಿಗಳು, ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ವ್ಯವಸ್ಥಿತ ಜಾಲ ಶಂಕೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related Posts

Leave a Comment