Home Kannada ಸ್ಟೋನ್‌ ಕ್ರಷರ್ ಮೇಲೆ ದಾಳಿ: 200 ಕೆ.ಜಿ ಜಿಲೆಟಿನ್, 700 ಡಿಟೊನೇಟರ್​ ವಶ

ಸ್ಟೋನ್‌ ಕ್ರಷರ್ ಮೇಲೆ ದಾಳಿ: 200 ಕೆ.ಜಿ ಜಿಲೆಟಿನ್, 700 ಡಿಟೊನೇಟರ್​ ವಶ

by Eha

ಧಾರವಾಡ: ಸ್ಟೋನ್ ಕ್ರಷರ್​ ಮೇಲೆ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಸುಮಾರು 200 ಕೆ.ಜಿ ಜಿಲೆಟಿನ್ ಕಡ್ಡಿ ಸೇರಿದಂತೆ 700 ಎಲೆಕ್ಟ್ರಾನಿಕ್ ಡಿಟೊನೇಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ಅಮ್ಮಿನಬಾವಿಯಲ್ಲಿನ ದಯಾನಂದ ಮಾಸೂರ ಎಂಬುವವರಿಗೆ ಸೇರಿದ ಕ್ರಷರ್​ನಲ್ಲಿ ಜಿಲೆಟಿನ್​ ಕಡ್ಡಿಗಳನ್ನು ಸಂಗ್ರಹಿಸಲಾಗಿದ್ದ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಕಾರ್ಯಾಚರಣೆ ವೇಳೆ ಸುಮಾರು 1,650 ಜಿಲೆಟಿನ್​ ಕಡ್ಡಿಗಳನ್ನು ವಶಕ್ಕೆ ಪಡೆದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿದೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment