Home Kannada ಸ್ನೇಹಿತನ ಸಾವಿನಿಂದ ನೊಂದು ಪ್ರಾಣ ಕಳೆದುಕೊಂಡ ಮೂವರು

ಸ್ನೇಹಿತನ ಸಾವಿನಿಂದ ನೊಂದು ಪ್ರಾಣ ಕಳೆದುಕೊಂಡ ಮೂವರು

by Eha

ಡೆಹ್ರಾಡೂನ್: ಬೇಟೆಗೆಂದು ಕಾಡಿಗೆ ಹೋದ ವೇಳೆ ಗುಂಡಿಗೆ ಸ್ನೇಹಿತ ಬಿಲಿಯಾಗಿದ್ದನು. ಈ ವಿಚಾರವಾಗಿ ಮನನನೊಂದ ಮೂವರು ಸ್ನೇಹಿತರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಾಖಂಡದ ನ್ಯೂತೆಹ್ರಿಯಲ್ಲಿ ನಡೆದಿದೆ. ಮೃತ ಯುವಕರನ್ನು ಸಂತೋಷ್, ಸೋಬನ್, ಪಂಕಜ್, ಅರ್ಜುನ್ ಎಂದು ಗುರುತಿಸಲಾಗಿದೆ. ಬೇಟೆಗೆ ಹೋದ ವೇಳೆ ಸಂತೋಷ್ ಗುಂಡು ತಾಗಿ ಮೃತಪಟ್ಟಿದ್ದನು. ಸ್ನೇಹಿತನ ಸಾವಿಗೆ ನಾವು ಕಾರಣ ಎಂದು ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 7 ಮಂದಿ ಯುವಕರು ಸೇರಿ ಬೇಟೆಗೆ ಹೋಗಿದ್ದರು. ಅರಣ್ಯದಲ್ಲಿ ಗನ್ ಹಿಡಿದು ಓಡಾಡುತ್ತಿದ್ದರು. ರಾಜೀವ್ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ಗನ್ ಟ್ರಿಗರ್ ಅದುಮಿ ಸಂತೋಷ್‍ನಿಗೆ ಗುಂಡು ತಾಗಿ ಸಾವನ್ನಪ್ಪಿದ್ದಾನೆ. ಈ ವೇಳೆ ಭಯಗೊಂಡ ರಾಜೀವ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಸಂತೋಷ್ ಜೊತೆಯಲ್ಲೇ ಇದ್ದ ಸ್ನೇಹಿತರು ಇವನ ಸಾವಿಗೆ ನಾವು ಕಾರಣ ಎಂದು ಮನನನೊಂದು ಸೋಬನ್, ಪಂಕಜ್, ಅರ್ಜುನ್ ಗ್ರಾಮಕ್ಕೆ ಮರಳಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಟೆಯಲ್ಲಿ ಸಂತೋಷ್ ಸಾವನ್ನಪ್ಪಿದ ವಿಚಾರವನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಸಂತೋಷ್ ಮೃತಪಟ್ಟರೆ, ಈತನ ಸ್ನೇಹಿತರು ವಿಷಸೇವಿಸಿದ್ದರು. ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸುತ್ತಿರುವಾಗಲೇ ಮೂವರು ಪ್ರಾಣ ಬಿಟ್ಟಿದ್ದಾರೆ.

Related Posts

Leave a Comment