Home Kannada ಹಗರಿಬೊಮ್ಮನಹಳ್ಳಿ: ಲಾರಿ ಹರಿದು ಬೈಕ್​​ ಸವಾರ ಸಾವು

ಹಗರಿಬೊಮ್ಮನಹಳ್ಳಿ: ಲಾರಿ ಹರಿದು ಬೈಕ್​​ ಸವಾರ ಸಾವು

by akash

ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್​ನಲ್ಲಿ ಬೈಕ್​ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪಟ್ಟಣದ ನಿವೃತ್ತ ರೇಷ್ಮೆ ಇಲಾಖೆ ನೌಕರ ಸಿ.ಪಂಪಾಪತಿ (65) ಮೃತ ದುರ್ದೈವಿ. ಇವರು ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್​ನಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಬೈಕ್​ ಮೇಲೆಯೇ ಹರಿದಿದೆ. ಲಾರಿ ಕೆಳಗೆ ಬೈಕ್​ ಸಿಲುಕಿಕೊಂಡಿದ್ದರೂ ಕೂಡ ಚಾಲಕ ಗಾಬರಿಯಿಂದ ಮುಂದೆ ಓಡಿಸಿದ್ದು, ಸ್ಥಳೀಯರು ಲಾರಿ ಚಾಲಕನಿಗೆ ಥಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ

Related Posts

Leave a Comment