Home Kannada ಹಣದ ವಿಚಾರಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ

ಹಣದ ವಿಚಾರಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ

by akash

ಹುಬ್ಬಳ್ಳಿ: ಹಣದ ವಿಚಾರಕ್ಕಾಗಿ ಸಹೋದರನಿಗೆ ಚಿಕ್ಕಪ್ಪನ ಮಗ ಚಾಕುವಿನಿಂದ ಇರಿದ ಘಟನೆ ಈಶ್ವರ ನಗರದಲ್ಲಿ ನಡೆದಿದೆ. ಸುನೀಲ್​ ಕೃಷ್ಣಾ ಘಾಟೇಕರ ಇರಿತಕ್ಕೊಳಗಾದ ಯುವಕ. ಈತನ ಚಿಕ್ಕಪ್ಪನ ಮಗ ಮಂಜು ಚಾಕು ಇರಿದಾತ. ಮದುವೆಗೆ ಹಣ ನೀಡುವಂತೆ ಸುನೀಲನನ್ನು ಮಂಜು ಪೀಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಮಾತಿಗೆ ಮಾತಿ ಬೆಳೆದು ಸುನೀಲ್​ಗೆ ಮಂಜು ಚಾಕುವಿನಿಂದ ಬೆನ್ನು ಮತ್ತು ದೇಹದ ಇತರೆಡೆ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗ್ತಿದೆ. ಸುನೀಲ್​ನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment