Home Kannada ಹಾನಗಲ್​ನಲ್ಲಿ ಜಿಂಕೆಗಳ ರಕ್ಷಣೆ: ಸುರಕ್ಷಿತವಾಗಿ ಕಾಡಿಗೆ ಬಿಡುಗಡೆ

ಹಾನಗಲ್​ನಲ್ಲಿ ಜಿಂಕೆಗಳ ರಕ್ಷಣೆ: ಸುರಕ್ಷಿತವಾಗಿ ಕಾಡಿಗೆ ಬಿಡುಗಡೆ

by akash

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಿಟಗೇನಕೊಪ್ಪದಲ್ಲಿ ಗಾಯಗೊಂಡು ಬಳಲುತ್ತಿದ್ದ ಜಿಂಕೆಯನ್ನು ಕಂಡ ಗ್ರಾಮಸ್ಥರು ಜಿಂಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟುಬಂದಿದ್ದಾರೆ. ಕಾಡಂಚಿನ ಜಮೀನಿನಲ್ಲಿದ್ದ ನಾಯಿಗಳು ಬೆನ್ನುಹತ್ತಿದ್ದರಿಂದ ಜಿಂಕೆ ದಾರಿ ತಪ್ಪಿ ನಾಡಿಗೆ ಬಂದಿತ್ತು.ಇದನ್ನು ನೋಡಿದ ಸ್ಥಳೀಯರು ಕಾಡು ಪ್ರಾಣಿಯನ್ನು ನಾಯಿಗಳಿಂದ ರಕ್ಷಿಸಿ, ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಜಿಂಕೆ ಚೇತರಿಸಿಕೊಳ್ಳುತ್ತಿದ್ದಂತೆ ಕಾಡಿಗೆ ಬಿಟ್ಟುಬಂದಿದ್ದಾರೆ.

Related Posts

Leave a Comment