Home Kannada ಹೃದಯಾಘಾತದಿಂದ ಅಮೆರಿಕದಲ್ಲಿ ಮೈಸೂರು ಮೂಲದ ಟೆಕ್ಕಿ ಸಾವು

ಹೃದಯಾಘಾತದಿಂದ ಅಮೆರಿಕದಲ್ಲಿ ಮೈಸೂರು ಮೂಲದ ಟೆಕ್ಕಿ ಸಾವು

by Eha

ಮೈಸೂರು: ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ಟೆಕ್ಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಗರದ ನಿವೃತ್ತ ಇಂಜಿನಿಯರ್ ತುಕಾರಾಮ್ ಎಂಬುವರ ಮಗ ಪ್ರತೀಕ್ ತೇಲ್ಕರ್ ಅಮೆರಿಕದ ಅಯೋವಾದಲ್ಲಿ ಫೆಬ್ರವರಿ 26ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಾರ್ಚ್ 5ರಂದು ಪ್ರತೀಕ್ ತೇಲ್ಕರ್ ಪಾರ್ಥಿವ ಶರೀರ ಮೈಸೂರಿಗೆ ಬರಲಿದೆ. ಪ್ರತೀಕ್ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದು, ವಿದ್ಯಾಭ್ಯಾಸ ಮುಗಿಸಿ ಅಲ್ಲೇ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇದೇ ಮಾರ್ಚ್ ತಿಂಗಳು ಮೈಸೂರಿಗೆ ಬಂದು ಇಲ್ಲೇ ಉದ್ಯೋಗ ಹುಡುಕಿಕೊಂಡು ನಂತರ ಮದುವೆಯಾಗುತ್ತೇನೆ ಎಂದು ಹೇಳಿದ್ದ ಎಂದು ಮೃತನ ತಂದೆ ಹೇಳಿದ್ದಾರೆ.

Related Posts

Leave a Comment